ಜಿ20 ಶೃಂಗಸಭೆ ಹಿನ್ನೆಲೆ: ಬೆಂಗಳೂರಿನ ತಾಜ್‌ವೆಸ್ಟೆಂಡ್‌ ಹೋಟೆಲ್ ವ್ಯಾಪ್ತಿಯಲ್ಲಿ ಡ್ರೋನ್‌, ಏರ್‌ಕ್ರಾಫ್ಟ್​​ ಹಾರಾಟ ನಿಷೇಧ

Prasthutha|

ಬೆಂಗಳೂರು: ನಗರದಲ್ಲಿ ಜುಲೈ 6 ಮತ್ತು 7 ರಂದು ಜಿ20 ಶೃಂಗಸಭೆ 2023 ನಡೆಯಲಿದೆ. ಅದರಂತೆ ಸಭೆಯಲ್ಲಿ ಭಾಗಿಯಾಗುವ ವಿದೇಶಿ ಪ್ರತಿನಿಧಿಗಳು, ವಿವಿಐಪಿಗಳು ಜುಲೈ 5ರಿಂದ ತಾಜ್‌ವೆಸ್ಟೆಂಡ್‌ ಹೋಟೆಲ್​ನಲ್ಲಿ ತಂಗಲಿರುವ ಹಿನ್ನೆಲೆ ಅಂದಿನಿಂದ ಹೊಟೇಲ್​ನ 1 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾಗೂ ಏರ್​ಕ್ರಾಫ್ಟ್​ ಹಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.

- Advertisement -

 ಜು.6 ಮತ್ತು 7ರಂದು ತಾಜ್‌ವೆಸ್ಟೆಂಡ್‌ ಸುತ್ತಮುತ್ತ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದ್ದು, ಓರ್ವ ಡಿಸಿಪಿ, ನಾಲ್ವರು ಎಸಿಪಿ, 11 ಇನ್ಸ್‌ಪೆಕ್ಟರ್‌, 32 ಪಿಎಸ್‌ಐ, 190 ಹೆಚ್‌ಸಿ, 40 ಪಿಸಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ.

ಬೆಂಗಳೂರಿನಲ್ಲಿ ಜಿ 20 ಶೃಂಗ ಸಭೆ ಹಿನ್ನಲೆ ವಿದೇಶಿ ಪ್ರತಿನಿಧಿಗಳು, ವಿವಿಐಪಿ ಸಭೆಯಲ್ಲಿ ಭಾಗಿಯಾಗುವವರು ತಾಜ್‌ವೆಸ್ಟೆಂಡ್‌ ಹೋಟೆಲ್​ನಲ್ಲಿ ತಂಗಲಿದ್ದಾರೆ. ಹೀಗಾಗಿ 1 ಕಿ.ಮೀ ವ್ಯಾಪ್ತಿಯೊಳಗೆ ತಾತ್ಕಾಲಿಕ ನೋ ಫ್ಲೈನ್ ಜೋನ್​ಗೆ ಆದೇಶಿಸಿಸುವಂತೆ ಕೇಂದ್ರ ವಿಭಾಗ ಡಿಸಿಪಿ ಮಾಡಿದ ಮನವಿ ಮೇರೆಗೆ ಪೊಲೀಸ್ ಆಯುಕ್ತರು ಡ್ರೋಣ್, ಏರ್ ಕ್ರಾಫ್ಟ್ ಹಾರಾಟ ನಿಷೇಧಿಸಿ ಆದೇಶಿಸಿದ್ದಾರೆ.

- Advertisement -

ಜಿ20 ಶೃಂಗಸಭೆಗೆ ಸೆಪ್ಟೆಂಬರ್​​​ ತಿಂಗಳಲ್ಲಿ ನವದೆಹಲಿಯಲ್ಲಿ ಚಾಲನೆ ನೀಡಲಾಗಿದ್ದು, ಕರ್ನಾಟಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಶೃಂಗಸಭೆ ನಡೆಯಲಿದೆ. ಜುಲೈ 6 ಮತ್ತು 7 ರಂದು ಬೆಂಗಳೂರಿನಲ್ಲಿ, ಜುಲೈ 9-16ರ ವರೆಗೆ ಹಂಪಿಯಲ್ಲಿ, ಆಗಸ್ಟ್ 1 ರಿಂದ 2 ರವರೆಗೆ ಮೈಸೂರಿನಲ್ಲಿ, ಆಗಸ್ಟ್ 16ರಿಂದ 19ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

Join Whatsapp