ಯುಎಇ ದೊರೆಯ ಹೆಸರಿನಲ್ಲಿ ದಿಲ್ಲಿ ಪಂಚ ತಾರಾ ಹೋಟೆಲಿಗೆ ಪಂಗನಾಮ ಹಾಕಿ ಪರಾರಿ

Prasthutha|

ನವದೆಹಲಿ: ಯುಎಇ ದೊರೆಯ ಹೆಸರಿನಲ್ಲಿ ದೆಹಲಿಯ ಪಂಚ ತಾರಾ ಹೋಟೆಲಿಗೆ ವ್ಯಕ್ತಿಯೋರ್ವ ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ.

- Advertisement -

ಮುಹಮ್ಮದ್ ಶರೀಫ್ ಎಂಬಾತ ಆಗಸ್ಟ್’ನಲ್ಲಿ ದೆಹಲಿಯ ಪಂಚತಾರಾ ಹೋಟೆಲಿಗೆ ಬಂದಿದ್ದು, ತಾನು ಯುಎಇ ನಿವಾಸಿ. ಅಬುದಾಬಿ ದೊರೆ ಶೇಖ್ ಫಲಾ ಬಿನ್ ಜಾಯೇದ್ ಅಲ್ ನಹ್ಯಾನ್ ಜೊತೆಗೆ ಇರುವವನು ಎಂದು ಹೇಳಿದ್ದಾನೆ.

ಅಬುದಾಬಿ ರಾಜಕುಟುಂಬದ ಕೆಲಸ ಮಾಡುತ್ತಿದ್ದೇನೆ ಎಂದು ದಿಲ್ಲಿ ಪಂಚ ತಾರಾ ಹೋಟೆಲಿನಲ್ಲಿ ನಾಲ್ಕು ತಿಂಗಳು ಉಳಿದಿದ್ದಾನೆ. ಅಂತಿಮವಾಗಿ ರೂ. 23 ಲಕ್ಷ ಬಾಕಿ ಉಳಿಸಿ ಪರಾರಿಯಾಗಿದ್ದಾನೆ.

- Advertisement -

ಲೀಲಾ ಪ್ಯಾಲೆಸ್ ಹೋಟೆಲಿನವರ ದೂರಿನ ಮೇಲೆ ವಂಚಕ ಮುಹಮ್ಮದ್ ಶರೀಫ್’ನ ಹುಡುಕಾಟದಲ್ಲಿ ಈಗ ದಿಲ್ಲಿ ಪೊಲೀಸರು ತೊಡಗಿದ್ದಾರೆ.

ಆಗಸ್ಟ್ 1ರಂದು ಶರೀಫ್ 427ನೇ ಸಂಖ್ಯೆಯ ಕೊಠಡಿಗೆ ಬಂದಿದ್ದಾನೆ. ನವೆಂಬರ್ 20ರಂದು ಸದ್ದು ಮಾಡದೆ ಹೊರಟು ಹೋಗಿದ್ದಾನೆ. ಒಂದು ಮುತ್ತಿನ ತಟ್ಟೆ, ಹಲವು ಬೆಳ್ಳಿಯ ವಸ್ತುಗಳು ಮೊದಲಾದವನ್ನು ಕಳವು ಮಾಡಿರುವುದಾಗಿ ಹೋಟೆಲಿನ ಸಿಬ್ಬಂದಿ ಹೇಳಿದ್ದಾರೆ.

ಶೇಖ್ ಅವರ ವ್ಯಕ್ತಿಗತ ವ್ಯವಹಾರವನ್ನು ಭಾರತದಲ್ಲಿ ತಾನು ನೋಡಿಕೊಳ್ಳುತ್ತಿರುವುದಾಗಿಯೂ ಆತ ಹೇಳಿದ್ದ. ಆತ ಯುಎಇ ನಿವಾಸಿ ಎಂಬ ಕಾರ್ಡ್ ಮುಂತಾದ ನಕಲಿ ವಸ್ತುಗಳನ್ನೂ ಹೊಂದಿದ್ದ. ಪೋಲೀಸರು ಈಗ ಅವನ್ನೆಲ್ಲ ಪರಿಶೀಲಿಸುತ್ತಿದ್ದು, ಅವು ನಕಲಿ ಎಂದು ಅನುಮಾನಿಸಿದ್ದಾರೆ.

ರೂಮು ಮತ್ತು ಆಹಾರ ಹಾಗೂ ಸೇವೆ ಸೇರಿ ಆತನ ಬಿಲ್ಲು ರೂ. 35 ಲಕ್ಷ ಆಗಿತ್ತು. ಆತನು 11.5 ಲಕ್ಷ ರೂಪಾಯಿ ಮಾತ್ರ ಸಲ್ಲಿಸಿದ್ದ. ಆತನು ನವೆಂಬರ್ 20ರ ತಾರೀಕಿನ ರೂ. 20 ಲಕ್ಷದ ಚೆಕ್ ಒಂದನ್ನು ಹೋಗುವ ಮೊದಲು ಹೋಟೆಲ್ ಸಿಬ್ಬಂದಿಗೆ ತಲುಪಿಸಿದ್ದ. ಅದರೆ ಲೆಕ್ಕ ಚುಕ್ತಾ ಮಾಡದೆ  ಪರಾರಿಯಾಗಿದ್ದಾನೆ.

Join Whatsapp