ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯನ್ನು ಅಪ್ಪಿಕೊಳ್ಳಲು ನುಗ್ಗಿದ ವ್ಯಕ್ತಿ; ಭದ್ರತಾ ವೈಫಲ್ಯ ಆರೋಪ

Prasthutha|

ನವದೆಹಲಿ: ಹೋಶಿಯಾರ್’ಪುರದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದಾಗ ಮಂಗಳವಾರ ವ್ಯಕ್ತಿಯೊಬ್ಬ ರಾಹುಲ್ ಗಾಂಧಿಯವರನ್ನು ಅಪ್ಪಿಕೊಳ್ಳಲು ಮುನ್ನುಗ್ಗಿದ್ದು, ಕಾರ್ಯಕರ್ತರು ಆತನನ್ನು ಎಳೆದು ದೂರ ಮಾಡಿದ್ದಾರೆ.

- Advertisement -

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮ್ರೀಂದರ್ ಸಿಂಗ್ ರಾಜಾ ಅವರು, ಇದು ಭದ್ರತಾ ವೈಫಲ್ಯ ಎಂದು ವಾಗ್ಯುದ್ಧ ನಡೆಸಿದ್ದಾರೆ.

ರಾಹುಲ್ ಗಾಂಧಿಯವರೇ ಆತನನ್ನು ಕರೆದಿದ್ದಾರೆ, ಇದರಲ್ಲಿ ಭದ್ರತಾ ವೈಫಲ್ಯ ಏನೂ ಇಲ್ಲ ಎಂದು ಇನ್ಸ್’ಪೆಕ್ಟರ್  ಜನರಲ್ ಜಿ. ಎಸ್. ಧಿಲ್ಲೋನ್ ಹೇಳಿದ್ದಾರೆ.

- Advertisement -

ವೀಡಿಯೋದಲ್ಲಿ ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬ ರಾಹುಲ್ ರತ್ತ ಧಾವಿಸಿದ್ದು ಕಾಣಿಸುತ್ತದೆ. ಆದರೆ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಆತನನ್ನು ಎಳೆದು ದೂರ ತಳ್ಳಿದ್ದಾರೆ.

ಅತಿಯಾದ ಚಳಿಯಲ್ಲೂ ಮಂಗಳವಾರ ಬೆಳಿಗ್ಗೆ ಪಂಜಾಬಿನ ತಾಂಡಾದಲ್ಲಿ ಇಂದಿನ ಭಾರತ್ ಜೋಡೋ ಯಾತ್ರೆ ಮುನ್ನಡೆಯಿತು. ಇಂದು ರಾತ್ರಿ ಮುಕೇರಿಯನ್’ನಲ್ಲಿ ಯಾತ್ರೆ ತಂಗಲಿದೆ. ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 30ರಂದು ಜಮ್ಮು ಕಾಶ್ಮೀರದಲ್ಲಿ ಕೊನೆಯ ಹೆಜ್ಜೆ ಇಡಲಿದೆ. 

Join Whatsapp