ನಿರಂತರ ಬೆಲೆ ಏರಿಕೆ ನಂತರ ದೇಶದಾದ್ಯಂತ ಇಂಧನ ಬೆಲೆ 15 ಪೈಸೆ ಕಡಿತ

Prasthutha|

ಹೊಸದಿಲ್ಲಿ : ದೇಶದಲ್ಲಿ ನಿರಂತರ ತೈಲ ಬೆಲೆ ಏರಿಸುತ್ತಲೇ ಸಾಮಾನ್ಯ ಜನರ ಮೇಲೆ ಹೊರೆ ಹೊರಿಸುತ್ತಾ ಇರುವ ಕೇಂದ್ರ ಸರಕಾರ ಅಚ್ಚರಿಯೆಂಬಂತೆ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ರವಿವಾರ ಇಂಧನ ದರದಲ್ಲಿ 15 ಪೈಸೆ ಕಡಿಮೆ ಮಾಡಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ವಿವರಗಳ ಪ್ರಕಾರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸತತ ಮೂರು ದಿನಗಳವರೆಗೆ ಸ್ಥಿರವಾಗಿಟ್ಟುಕೊಂಡ ನಂತರ 15 ಪೈಸೆಗಳವರೆಗೆ ಕಡಿಮೆ ಮಾಡಲಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ 15 ಪೈಸೆ ಇಳಿಕೆಯಾಗಿದ್ದು, ಪ್ರಸ್ತುತ ಪ್ರತಿ ಲೀಟರ್‌ಗೆ ರೂ. 101.19 ಹಾಗೂ ರೂ. 88.62 ರಷ್ಟಿದೆ.

- Advertisement -

ಇನ್ನು ಇತರ ಮೆಟ್ರೋ ನಗರಗಳು ಕೂಡ ಇಂಧನ ದರದಲ್ಲಿ ಇದೇ ರೀತಿಯ ಬದಲಾವಣೆಗಳಾಗಿವೆ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ಗೆ ರೂ. 101.72 ಹಾಗೂ ಡೀಸೆಲ್‌ಗೆ ರೂ. 91.71. ಚೆನ್ನೈನಲ್ಲಿ ಇಂಧನ ದರಗಳನ್ನು 12 ಪೈಸೆ ಕಡಿಮೆ ಮಾಡಲಾಗಿದೆ. ಹೀಗಾಗಿ ಪೆಟ್ರೋಲ್ ಈಗ ಲೀಟರ್‌ಗೆ ರೂ. 98.96 ರಷ್ಟಿದೆ, ಡೀಸೆಲ್ ಲೀಟರ್‌ಗೆ ರೂ. 93.26 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಈಗ ಪ್ರತಿ ಲೀಟರ್‌ಗೆ ರೂ. 104.70 ಹಾಗೂ ಡೀಸೆಲ್‌ಗೆ ರೂ.94.04. ಇದೆ ಎಂದು ತಿಳಿದು ಬಂದಿದೆ.



Join Whatsapp