ರಿಯಾದ್: ಕೋವಿಡ್ ಕಾರಣದಿಂದಾಗಿ ಭಾರತದಿಂದ ಬರುವ ವಿಮಾನಗಳಿಗೆ ಸೌದಿ ಅರೇಬಿಯಾ ದೇಶವು ಹೇರಿದ್ದ ನಿಯಂತ್ರಣವು ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಸೌದಿ ಗಝೆಟ್ ಟ್ವಿಟರ್’ನಲ್ಲಿ ತಿಳಿಸಿದೆ.
ಡಿಸೆಂಬರ್ 1, ಬುಧವಾರದಿಂದ ಭಾರತ ಸೇರಿದಂತೆ ಪಾಕಿಸ್ತಾನ, ಬ್ರೆಝಿಲ್, ವಿಯೆಟ್ನಾಂ,ಇಜಿಪ್ಟ್ ಇಂಡೋನೇಷ್ಯಾ ದೇಶಗಳಿಂದ ಸೌದಿ ಅರೇಬಿಯಾಗೆ ನೇರವಾಗಿ ವಿಮಾನಯಾನ ಸೇವೆಗಳು ಪ್ರಾರಂಭವಾಗಲಿದೆ. ಈ ದೇಶಗಳಿಂದ ಬರುವವರಿಗೆ ಸೌದಿಯಲ್ಲಿ 5 ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಸಂಪರ್ಕತಡೆ (INSTITUTIONAL QUARANTINE) ಕಡ್ಡಾಯವಾಗಿದೆ
ಕೋವಿಡ್ ಕಾರಣದಿಂದಾಗಿ ಭಾರತದಿಂದ ಸೌದಿ ಅರೇಬಿಯಾ ದೇಶಕ್ಕೆ ನೇರವಾಗಿ ತೆರಳುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಸದ್ಯ, ಯುಎಇ, ಮಾಲ್ಡೀವ್ಸ್ ಸೇರಿದಂತೆ ಕೆಲ ಅನುಮತಿ ಪಡೆದ ರಾಷ್ಟ್ರಗಳಲ್ಲಿ ನಿರ್ಧಿಷ್ಟ ದಿವಸಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ಬಳಿಕವಷ್ಟೇ ಸೌದಿ ಅರೇಬಿಯಾಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಉದ್ಯೋಗ ಸೇರಿದಂತೆ ಇನ್ನಿತರ ಆವಶ್ಯಕತೆಗಳಿಗಾಗಿ ತೆರಳುವವರು ಸುತ್ತಿ ಬಳಸಿ ಸೌದಿ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.