ಕಾನ್ಪುರ ಟೆಸ್ಟ್: ಟ್ವಿಟರ್’ನಲ್ಲಿ ‘ಗುಟ್ಕಾ ಭಾಯ್’ ಫುಲ್ ಟ್ರೆಂಡಿಂಗ್ !

Prasthutha: November 25, 2021

ಕಾನ್ಪುರ:  ಫೇಮಸ್ ಆಗಲು ಈಗಿನ ಸೋಷಿಯಲ್ ಮೀಡಿಯಾ ಕಾಲದಲ್ಲಿ ಜನರು ಏನೆಲ್ಲಾ ಕಸರತ್ತುಗಳನ್ನು ನಡೆಸುತ್ತಿರುತ್ತಾರೆ ಎಂಬುದನ್ನು ನಾವು ನಿತ್ಯ ನೋಡುತ್ತೇವೆ. ಆದರೆ ಇಲ್ಲೊಬ್ಬ ಕ್ರಿಕೆಟ್ ಅಭಿಮಾನಿ ತನಗರಿವಿಲ್ಲದೇ ಕ್ಯಾಮೆರಾ ಕಣ್ಣಿಗೆ ಬಿದ್ದು ಫುಲ್ ಟ್ರೆಂಡಿಂಗ್’ನಲ್ಲಿದ್ದಾನೆ.

ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್​ ಪಂದ್ಯದ ಮೊದಲನೇ ದಿನ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು. ಈ ನಡುವೆ ಯುವಕನೋರ್ವ ಬಾಯಲ್ಲಿ ಗುಟ್ಕಾ ತುಂಬಿಕೊಂಡು ಸೀಟ್’ನಲ್ಲಿ ಹಿಂದಕ್ಕೆ ವಾಲಿ ಕುಳಿತು ಸ್ನೇಹಿತನ ಜೊತೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಇದೇ ಸಮಯಕ್ಕೆ ಸರಿಯಾಗಿ ಕ್ಯಾಮರಾಮೆನ್​ ಕಣ್ಣು ಈತನ ಮೇಲೆ ಬಿದ್ದಿದೆ. ತಾನು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಫೋನ್’ನಲ್ಲೇ ಬಿಝಿಯಾಗಿದ್ದ ಕ್ರಿಕೆಟ್ ಕಮ್ ಗುಟ್ಕಾ ಪ್ರೇಮಿ  ಕುಳಿತಲ್ಲಿಂದಲೇ ಸ್ಟೈಲ್ ಆಗಿಯೇ ಕೈ ಬೀಸಿದ್ದ.

ಟ್ವಿಟರ್’ನಲ್ಲಿ ಮೀಮ್’ಗಳನ್ನು ಹಂಚಿಕೊಳ್ಳುವುದರಲ್ಲೇ ಫುಲ್ ಫೇಮಸ್ ಆಗಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಮ್ ಜಾಫರ್, ಬಾಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್’ನಲ್ಲಿ ಮಾತನಾಡುತ್ತಿದ್ದ ಯುವಕನ ಫೋಟೋ ಎಡಿಟ್ ಮಾಡಿ.. ಫೋನ್​ನ ಆ ಕಡೆಯವರು ಗುಟ್ಕಾ ಉಗುಳಿ ಮಾತ್ನಾಡಪ್ಪಾ ಅಂತಿರ್ತಾರೆ ಅಂತಾ ಕಾಲೆಳೆದಿದ್ದಾರೆ.

|| Under image – 1X1 – AD || ——————————–

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!