ಬಿಪಿಎಲ್ ಕಾರ್ಡ್ ಹೊಂದಿರುವ ದಲಿತರಿಗೆ ಉಚಿತ ವಿದ್ಯುತ್ ಯೋಜನೆ: ಅದ್ದೂರಿ ಘೋಷಣೆಯನ್ನು ಸದ್ದಿಲ್ಲದೆ ವಾಪಾಸು ಪಡೆದ ಬಿಜೆಪಿ ಸರಕಾರ

Prasthutha|

ಬೆಂಗಳೂರು: ಸರಕಾರದ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಗೃಹ ಬಳಕೆದಾರರಿಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂಬ ಆದೇಶವನ್ನು ಹೊರಡಿಸಿಲಾಗಿತ್ತು. ಆದರೆ ಯೋಜನೆಯನ್ನು ಘೋಷಿಸಿದ ಕೆಲ ದಿನಗಳ ಒಳಗಾಗಿ ಆ ಆದೇಶವನ್ನು ಸರಕಾರ ವಾಪಾಸು ಪಡೆದಿದೆ.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ಎಸ್ಸಿ/ಎಸ್ಟಿ ಸಮುದಾಯದ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ 75 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿದ್ದರು. ಬಾಬು ಜಗಜೀವನ್‌ 115ನೇ ಜಯಂತಿ ಅಂಗವಾಗಿ ಈ ಹಿಂದೆ ಭಾಗ್ಯಜ್ಯೋತಿ ಮತ್ತು ಕುಟಿರಜ್ಯೋತಿ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ 40 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆಯನ್ನು 75 ಯೂನಿಟ್‌ ಗೆ ಹೆಚ್ಚಿಸಲಾಗಿದೆ. ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ ಎಂದು ಹೇಳಿದ್ದರು.
ಆದರೆ ಯೋಜನೆ ಘೋಷಿಸಿದ ಕೆಲವೇ ದಿನಗಳಲ್ಲಿ ಸರಕಾರ ಈ ಆದೇಶವನ್ನು ವಾಪಾಸು ಪಡೆದಿದ್ದು , ಬಿಪಿಎಲ್ ಕಾರ್ಡ್ ಹೊಂದಿರುವ ದಲಿತರನ್ನು ವಂಚಿಸಿದೆ. ಬಹಳ ಅದ್ದೂರಿಯಾಗಿ ಘೋಷಿಸಿದ ಯೋಜನೆ ಇದೀಗ ಸರಕಾರ ಸದ್ದಿಲ್ಲದೇ ವಾಪಾಸು ಪಡೆದಿದೆ.



Join Whatsapp