ಮತ್ತೊಂದು ಮಸೀದಿಯ ವಿರುದ್ಧ ಹೈಕೋರ್ಟ್ ಮೊರೆ ಹೋದ ಹಿಂದೂ ಮಹಾಸಭಾ; ಸೆಪ್ಟೆಂಬರ್‌ 15ರಂದು ವಿಚಾರಣೆ

Prasthutha|

ಲಕ್ನೋ: ಉತ್ತರ ಪ್ರದೇಶದ ಮತ್ತೊಂದು ಐತಿಹಾಸಿಕ ಮತ್ತು ಹಳೆಯ ಮಸೀದಿ ಕುರಿತು ವಿವಾದ ಶುರುವಾಗಿದ್ದು, ಬದೌನ್ ಜಾಮಾ ಮಸೀದಿ ಶಿವನ ದೇಗುಲವೆಂದು ಹಿಂದೂ ಮಹಾಸಭಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

- Advertisement -


ಬದೌನ್ ಮಸೀದಿ ಭಾರತದ 7 ನೇ ಅತಿ ದೊಡ್ಡ ಮಸೀದಿಯಾಗಿದೆ.ಇದೀಗ ಹಿಂದುತ್ವ ಸಂಘಟನೆ ಶಿವನ ದೇವಾಲಯ ಎಂದು ವಿವಾದ ಸೃಷ್ಟಿಸಿದೆ.


ಮಸೀದಿಯಲ್ಲಿ ಸನಾತನ ಧರ್ಮ ಪಾಲಕರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

- Advertisement -


ಕಟ್ಟಡವು ಮಸೀದಿ ಅಲ್ಲ,ನೀಲಕಂಠ ಮಹದೇವ ಮಹರಾಜ್ ಅವರ ಇಶಾನ್‌ ಮಂದಿರ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಇದರ ಜೊತೆಗೆ ಮಸೀದಿ ಬಗ್ಗೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಆಯೋಗವೊಂದನ್ನು ರಚಿಸುವಂತೆ ಕೋರಿ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.


ಪ್ರಕರಣ ವಿಚಾರಣೆ ನಡೆಸಿದ ಸಿವಿಲ್‌ ನ್ಯಾಯಾಧೀಶ ವಿಜಯ್‌ ಗುಪ್ತಾ ಅವರು, ಸೆಪ್ಟೆಂಬರ್‌ 15ರ ಮುಂದಿನ ವಿಚಾರಣೆ ವೇಳೆ ತಮ್ಮ ಪರ ವಾದ ಮಂಡನೆಗೆ ಹಾಜರಿರುವಂತೆ ಜಾಮಾ ಮಸೀದಿ ನಿರ್ವಹಣಾ ಸಮಿತಿ ಇಂತೆಜಾಮಿಯಾಗೆ ಸೂಚಿಸಿದೆ.

Join Whatsapp