ಉಚಿತ ವಿದ್ಯುತ್, ಮಹಿಳೆಯರಿಗೆ ಒಂದೂವರೆ ಸಾವಿರ: ಹಿಮಾಚಲದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

Prasthutha|

ಶಿಮ್ಲಾ: ಉಚಿತ ವಿದ್ಯುತ್, ಮಹಿಳೆಯರಿಗೆ ಒಂದೂವರೆ ಸಾವಿರವಲ್ಲದೆ ಹಿಂದಿನ ಪಿಂಚಣಿ ಪದ್ಧತಿಯನ್ನು ಮರು ಸ್ಥಾಪಿಸುವುದರ ಜೊತೆಗೆ ವರುಷಕ್ಕೆ ರಾಜ್ಯದಲ್ಲಿ ಒಂದೂವರೆ ಲಕ್ಷ ಉದ್ಯೋಗ ಸೃಷ್ಟಿಯ ಆಶ್ವಾಸನೆಯನ್ನು ಈ ಬಾರಿಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದೆ.

- Advertisement -

ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ಮತದಾನ ನಡೆಯಲಿದ್ದು, ಮತ್ತೆ ಅಧಿಕಾರಕ್ಕೆ ಹಿಂದಿರುಗುವ ಗುರಿಯೊಡನೆ ಕಾಂಗ್ರೆಸ್ ಪಕ್ಷವು ಶನಿವಾರ ರಾಜ್ಯಕ್ಕೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಸರಕಾರಿ ನೌಕರರಿಗೆ ಒಪಿಎಸ್- ಹಳೆಯ ಪಿಂಚಣಿ ಯೋಜನೆಗಳನ್ನು ಮರು ಸ್ಥಾಪಿಸುವುದು, ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, 18ರಿಂದ 60ರೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳೂ ರೂ. 1,500ರ ಹಣ ನೆರವು ಘೋಷಿಸಿದೆ. ವರ್ಷಕ್ಕೆ ಒಂದು ಲಕ್ಷ ಸರಕಾರಿ ಉದ್ಯೋಗ ಸೃಷ್ಟಿ, ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಸರಕಾರಿ ಚಿಕಿತ್ಸಾಲಯ ಆರಂಭವನ್ನೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಅಲ್ಲದೆ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ರೂ. 10 ಕೋಟಿಯ ನಿಧಿಯಲ್ಲಿ ಯುವಕರಿಗೆ ಸ್ಟಾರ್ಟಪ್ ಸಹಾಯ ಒದಗಿಸುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

- Advertisement -

ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಪ್ರತಿಭಾ ಸಿಂಗ್ ಇವರುಗಳು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಸ್ಮಾರ್ಟ್ ವಿಲೇಜ್ ಯೋಜನೆ ಮೂಲಕ ಗ್ರಾಮೀಣ ಪ್ರವಾಸೋದ್ಯಮ ಬೆಳೆಸುವುದಾಗಿಯೂ ಆಶ್ವಾಸನೆ ನೀಡಲಾಗಿದೆ.

ಕಾಂಗ್ರೆಸ್ ಸರಕಾರ ರಚನೆಯಾದ ಬೆನ್ನಿಗೇ ಎಲ್ಲ ಆಶ್ವಾಸನೆಗಳನ್ನು ನೆರವೇರಿಸಲಾಗುವುದು ಎಂದು ಶುಕ್ಲಾ ಹೇಳಿದರು.

 “ಎಲ್ಲ ಆಶ್ವಾಸನೆಗಳನ್ನು ನೆರವೇರಿಸುವ ಪರಂಪರೆಯನ್ನು ಕಾಂಗ್ರೆಸ್ ಹೊಂದಿದೆ. ಬಿಜೆಪಿಯವರು ಆಶ್ವಾಸನೆ ಕೊಡುತ್ತಾರೆ, ಆಮೇಲೆ ಅವನ್ನು ನೆರವೇರಿಸದೆ ಜುಮ್ಲಾ ಮಾಡುತ್ತ ಹೋಗುತ್ತಾರೆ” ಎಂದು ಶುಕ್ಲಾ ಹೇಳಿದರು.

“ಕಾಂಗ್ರೆಸ್ ಸರಕಾರ ರಚನೆಯಾದ ಮಂತ್ರಿಮಂಡಲದ ಮೊದಲ ಸಂಪುಟ ಸಭೆಯಲ್ಲೇ ಒಂದು ಲಕ್ಷ ಸರಕಾರಿ ನೌಕರಿ ನೀಡಿಕೆಗೆ ಚಾಲನೆ ನೀಡಲಾಗುವುದು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಆ ಮೂಲಕ ಯುವಕರು ಹೊಸ ಅವಕಾಶ ಪಡೆಯುವರು. ವೃದ್ಧಾಪ್ಯ ವೇತನವನ್ನು ಹೆಚ್ಚಿಸಲಾಗುವುದು. 75 ವರ್ಷ ಮೇರಿದವರಿಗೆ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುವುದು” ಎಂದೂ ಅವರು ಹೇಳಿದರು.



Join Whatsapp