ಚುನಾವಣೆ ವೇಳೆ ಉಚಿತ ಕೊಡುಗೆ: ಕೇಂದ್ರ, ಆಯೋಗಕ್ಕೆ ಸುಪ್ರೀಂ ನೋಟಿಸ್

Prasthutha|

ನವದೆಹಲಿ: ಚುನಾವಣೆ ವೇಳೆ ಉಚಿತ ಕೊಡುಗೆಗಳ ವಿರುದ್ಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಒಕ್ಕೂಟ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಮಂಗಳವಾರ ಸುಪ್ರೀಂ ಕೋರ್ಟು ನೋಟಿಸ್ ಜಾರಿ ಮಾಡಿದೆ.

- Advertisement -

ಸಾರ್ವಜನಿಕ ನಿಧಿಯಿಂದ ಜನರಿಗೆ ಕೊಡುಗೆ ನೀಡುವುದು, ಚುನಾವಣಾ ಚಿಹ್ನೆ ರೂಪದಲ್ಲಿ ಏನನ್ನಾದರೂ ಹಂಚುವುದು ಇವನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯು ಸೋಮವಾರ ಉತ್ತರ ಪ್ರದೇಶದ ಅಭ್ಯರ್ಥಿಗಳ ಪಟ್ಟಿಯನ್ನು ಬಹುಪಾಲು ಅಂತಿಮಗೊಳಿಸಿದ್ದು ಮಂಗಳವಾರ ಅದನ್ನು ಘೋಷಣೆ ಮಾಡಿದರು. 80 ಜನ ಹಾಲಿ ಎಂಎಲ್ ಎಗಳಿಗೆ ಟಿಕೆಟ್ ನಿರಾಕರಿಸಲಾಗಿದೆ ಮತ್ತು ಹತ್ತಕ್ಕೂ ಹೆಚ್ಚು ಶಾಸಕರ ಕ್ಷೇತ್ರವನ್ನು ಬದಲಿಸಿ ಟಿಕೆಟ್ ನೀಡಲಾಗಿದೆ.

- Advertisement -

ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದ್ದು 197 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿ ಘೋಷಿಸಲಾಗಿದೆ. ಇಂದು 172 ಅಭ್ಯರ್ಥಿಗಳ ಹೆಸರು ಘೋಷಿಸಲಾಯಿತು. ಉಳಿದ 30 ಕ್ಷೇತ್ರಗಳನ್ನು ಬಿಜೆಪಿಯು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.
ಕೋವಿಡ್ ನಲ್ಲಿ ರಕ್ಷಣೆಯ ಚುನಾವಣೆಯನ್ನು 5 ರಾಜ್ಯಗಳಲ್ಲಿಯೂ ನಡೆಸುವುದಾಗಿ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಂಗಳವಾರ ಹೇಳಿದರು.

Join Whatsapp