ಉಡುಪಿ: ಮನೆ ಮಾರಾಟ ನೆಪದಲ್ಲಿ ಹಣ ಪಡೆದು ವಂಚನೆ

Prasthutha|

ಉಡುಪಿ: ಮನೆ ಮಾರಾಟ ನೆಪದಲ್ಲಿ ಹಣಪಡೆದು ವಂಚಿಸಿದ ಘಟನೆ ನಡೆದಿದೆ. ಶಿರಸಿಯ ಸತ್ಯನಾರಾಯಣ ಶೆಟ್ಟಿ ಅವರಿಗೆ ಗುಂಡಿಬೈಲಿನಲ್ಲಿ 3.95 ಸೆಂಟ್ಸ್‌ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಆರ್‌ಸಿಸಿ ಮನೆಯನ್ನು ಆರೋಪಿ ಕಿದಿಯೂರಿನ ಭಾಸ್ಕರ ಸುವರ್ಣ ಅವರು 1,05,00,000 ರೂ.ಗೆ ಮಾರಾಟ ಮಾಡುವ ಬಗ್ಗೆ 2022ರ ಆಗಸ್ಟ್‌ ತಿಂಗಳಲ್ಲಿ ಕರಾರು ಮಾಡಿಕೊಂಡಿದ್ದರು.

- Advertisement -

ಅದರಂತೆ ಸತ್ಯನಾರಾಯಣ ಶೆಟ್ಟಿ ಅವರಿಂದ ಆರೋಪಿಯು ಹಂತ ಹಂತವಾಗಿ 13,00,000 ರೂ. ಪಡೆದು ಜಾಗ ಮತ್ತು ಮನೆಯನ್ನು ಮಾರಾಟ ಮಾಡದೇ ವಂಚಿಸಿದ್ದಾನೆ. ಭಾಸ್ಕರ ಸುವರ್ಣರೊಂದಿಗೆ ಇತರ ಆರೋಪಿಗಳಾದ ಶಿರ್ವದ ಪ್ರಭಾಕರ ಸಾಲ್ಯಾನ್‌, ಚಿಕ್ಕಬಳ್ಳಾಪುರದ ನಾಗರಾಜ್‌ ಕೆ.ಎನ್‌., ಬ್ರಹ್ಮಾವರದ ಕೆ.ಎನ್‌. ಗೀತಾ, ಕೆ.ಎನ್‌. ಸುಷ್ಮಾ , ಕಾಪುವಿನ ಸ್ಮಿತಾ ಅವರು ಸೇರಿಕೊಂಡು ಮೋಸ, ವಂಚನೆ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp