ವಾಷಿಂಗ್ಟನ್ ಆಗಸ್ಟ್ 2: ಭಾನುವಾರ ನಡೆದ ಹೆಲಿಕಾಪ್ಟರ್ ದುರಂತವೊಂದರಲ್ಲಿ ನಾಲ್ವರು ಮೃತಪಟ್ಟ ಘಟನೆ ವರದಿಯಾಗಿದೆ. ಭಾನುವಾರ ಮಧ್ಯಾಹ್ನ ಸರಿಸುಮಾರು 1 ಘಂಟೆಯ ಹೊತ್ತಿಗೆ ಹೆಲಿಕಾಪ್ಟರ್ ಪತನವಾಗಿದೆಯೆಂದು ಕೊಲೊಸಾ ಕೌಂಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಈ ಹೆಲಿಕಾಪ್ಟರ್ ಸ್ಯಾಕ್ರಮೆಂಟೋದ ವಾಯುವ್ಯದ ಕಡೆಗೆ ಹಾರಾಟ ನಡೆಸುತ್ತಿತ್ತು. ಹೆಲಿಕಾಪ್ಟರ್ ಪತನಕ್ಕೆ ನಿರ್ದಿಷ್ಟ ಕಾರಣ ಬಹಿರಂಗವಾಗಿಲ್ಲವೆಂದು ಕ್ಯಾಲಿಫೋರ್ನಿಯಾದ ವಾಯುಯಾನ ಸಂಸ್ಥೆಯ ಆಡಳಿತ ನಿರ್ದೇಶಕ ವಕ್ತಾರರಾದ ಇಯಾನ್ ಗ್ರೆಗರ್ ತಿಳಿಸಿದ್ದಾರೆ. ಮಾತ್ರವಲ್ಲದೆ ಹೆಲಿಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವುದಾಗಿ ಎನ್.ಟಿ.ಎಸ್.ಬಿ ವಕ್ತಾರರಾದ ಜೆನ್ನಿಫರ್ ಗೇಬ್ರಿಸ್ ಸ್ಪಷ್ಟಪಡಿಸಿದ್ದಾರೆ.