ಲಖಿಂಪುರ್ ಹಿಂಸಾಚಾರ| ಬಿಜೆಪಿ ನಾಯಕ ಸೇರಿದಂತೆ ನಾಲ್ವರ ಬಂಧನ

Prasthutha|

ಲಖ್ನೋ: ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸೇರಿದಂತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ.

- Advertisement -

ಘಟನಾ ಸ್ಥಳದಿಂದ ಪರಾರಿಯಾಗಿದ್ದ ಸ್ಥಳೀಯ ಬಿಜೆಪಿ ನಾಯಕ ಸುಮಿತ್ ಜೈಸ್ವಾಲ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಸುಮಿತ್ ಹೊರತಾಗಿ, ನಂದನ್ ಸಿಂಗ್ ಬಿಷ್ಟ್, ಶಿಶುಪಾಲ್ ಮತ್ತು ಸತ್ಯಪ್ರಕಾಶ್ ತ್ರಿಪಾಠಿಯನ್ನು ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಗಳು ಪರಾರಿಯಾಗುತ್ತಿರುವ ವೀಡಿಯೋ ತುಣುಕು ಈ ಹಿಂದೆಯೇ ವೈರಲಾಗಿತ್ತು.

ಸತ್ಯಪ್ರಕಾಶ್ ತ್ರಿಪಾಠಿಯಿಂದ ಗನ್ ಮತ್ತು ಮೂರು ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಒಬ್ಬ ಪತ್ರಕರ್ತ ಸೇರಿದಂತೆ ರೈತರನ್ನು ಹತ್ಯೆಗೈದಿದ್ದನು.



Join Whatsapp