ಕೋವಿಡ್‌ನಿಂದ ಗುಣಮುಖವಾಗಿದ್ದ ಮಹಿಳೆಗೆ ಹೃದಯಾಘಾತ, 15 ಬಾರಿ ಸಿಪಿಆರ್ ನಡೆಸಿ ಬದುಕಿಸಿದ ಫೊರ್ಟಿಸ್ ಆಸ್ಪತ್ರೆ ವೈದ್ಯರ ತಂಡ

Prasthutha|

ಬೆಂಗಳೂರು: ಕೋವಿಡ್ ಮೂರನೇ ಅಲೆಯಿಂದ ಬಳಲಿದ್ದ ಮಹಿಳೆಯಲ್ಲಿ ಹಠಾತ್ ಹೃದಯಾಘಾತ ಕಾಣಿಸಿಕೊಂಡು, ಬರೋಬ್ಬರಿ 15 ಬಾರಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಸೆಷನ್ ಮಾಡಿದ ಬಳಿಕ ಆಕೆಯನ್ನು ಉಳಿಸಿಕೊಳ್ಳಲಾಗಿದೆ ಎಂದು ಫೊರ್ಟಿಸ್ ಆಸ್ಪತ್ರೆ ಇಂಟರ್ ವೆನ್ಷನ್ ಕಾರ್ಡಿಯಾಲಜಿ ನಿರ್ದೇಶಕ ಡಾ. ರಾಜ್‌ಪಾಲ್ ಸಿಂಗ್ ಹೇಳಿದ್ದಾರೆ.

- Advertisement -

ಕಳೆದ ಕೆಲ ತಿಂಗಳ ಹಿಂದೆ 42 ವರ್ಷದ ಮಹಿಳೆಯು  ಗರ್ಭಕೋಶಕ್ಕೆ ಸಂಬಂಧಿಸಿದ ಫಿಬ್ರಾಯ್ಡ್ಸ್ ಯೂಟರಿನ್ ಸಮಸ್ಯೆ ಹೊಂದಿದ್ದರು. ಇದರಿಂದ ಆಕೆಗೆ ಹೆಚ್ಚು ರಕ್ತಸ್ತ್ರಾವ ನೋವುಯುಕ್ತ ಪೀರಿಯೆಡ್‌ನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಗರ್ಭಕೋಶಕ್ಕೆ ಸಂಬಂಧಿಸಿದ ಫಿಬ್ರಾಯ್ಡ್ಸ್ ಯೂಟರಿನ್ ನನ್ನು  ತೆಗೆಸಲು ಆಸ್ಪತ್ರೆಗೆ ದಾಖಲಾಗಿದ್ದರು. ಈಕೆ ಮೂರನೇ ಅಲೆಯಲ್ಲಿ ಕೊವಿಡ್ ಗೆ ತುತ್ತಾಗಿ, ಗುಣಮುಖರಾಗಿದ್ದರು. ಆದರೆ ಆಸ್ಪತ್ರೆಗೆ ದಾಖಲಾದ ಬಳಿಕ ಆಕೆಗೆ ಅನೀಮಿಯಾ ಇರುವುದು ಪತ್ತೆಯಾಯಿತು. ಇದರ ಚಿಕಿತ್ಸೆ ಮುಂದುವರೆಸಿದೆವು. ಈ ವೇಳೆ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿವಾರಿಸಲು ಕಾಗ್ಯಲೇಶನ್ ಪರೀಕ್ಷೆಯನ್ನು ನಡೆಸಿದ್ದರು. ಎಲ್ಲವೂ ಸುಸೂತ್ರವಾಗಿಯೇ ನಡೆದು, ಗರ್ಭಕೋಶಕ್ಕೆ ಸಂಬಂಧಿಸಿ ಫಿಬ್ರಾಯ್ಡ್ಸ್ ಯೂಟರಿನ್ ನನ್ನು ತೆಗೆದುಹಾಕಲಾಯಿತು. ಇದರಿಂದ ಆಕೆ ಮೊದಲ ದಿನವೇ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು. ಈ ಹೃದಯಾಘಾತಕ್ಕೆ ಕಾರಣ ಮೂರನೇ ಅಲೆಯ ಕೋವಿಡ್ ನ ದುಷ್ಪರಿಣಾಮ ಎಂದು ಅನುಮಾನಿಸಲಾಗಿದೆ ಎಂದರು.

ಆಕೆ ತೀವ್ರತರದ ಪಲ್ಮನರಿ ಎಂಬೋಲಿಸಂ ಸಮಸ್ಯೆಯಿಂದ ಬಳಲುತ್ತಿದ್ದರು. ಆಕೆಗೆ ಹೃದಯಾಘಾತ ಸಂಭವಿಸಿದ ವೇಳೆ ಬರೋಬ್ಬರಿ 15 ಬಾರಿ ಸಿಪಿಆರ್ ಮಾಡಲಾಗಿದೆ. ಸ್ತೀರೋಗ ತಜ್ಞೆ ಮನೀಷಾ ಸಿಂಗ್, ಕಾರ್ಡಿಯಾಲಜಿ ನಿರ್ದೇಶಕ ಡಾ. ರಾಜ್ ಪಾಲ್ ಸಿಂಗ್ ಸೇರಿದಂತೆ ವೈದ್ಯರ ತಂಡ ಕಾರ್ಯಪ್ರವೃತ್ತಿಯಾಗಿ ಆಕೆಗೆ ಹೃದಯ, ಗರ್ಭಕೋಶ ಹಾಗೂ ಶ್ವಾಸಕೋಶದ ಚಿಕಿತ್ಸೆಗಳನ್ನು ನಿರಂತವಾಗಿ ನೀಡಲಾಗಿದೆ. 72 ಗಂಟೆಗಳ ನಿರಂತ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸುಧಾರಿಸಿದ್ದಾರೆ ಎಂದು ವಿವರಿಸಿದರು.

- Advertisement -

ಕಾರ್ಡಿಯಾಲಜಿಸ್ಟ್ ಡಾ. ರಾಜ್ ಪಾಲ್ ಸಿಂಗ್ ಮಾತನಾಡಿ, ಕಳೆದ 2 ತಿಂಗಳ ಹಿಂದೆ ಆಕೆಗೆ ಕೋವಿಡ್ ಸೋಂಕು ತಗುಲಿತ್ತು. ಇದರಿಂದಲೇ ಹೃದಯಾಘಾತ ಸಂಭವಿಸಿದೆ ಎನ್ನುವ ಅನುಮಾನವಿದೆ. ಕೆಲವೊಮ್ಮೆ ಕೋವಿಡ್ ನಂತರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಾಗುವ ಸಾಧ್ಯತೆ ಇದೆ. ಈ ಪ್ರಕರಣವೂ ಸಹ ಇದೇ ಸಾಲಿಗೆ ಸೇರಲಿದೆ. ಹೀಗಾಗಿ ಆಕೆಗೆ ಈಗಲೂ ರಕ್ತ ತೆಳ್ಳಗಾಗುವ ಮಾತ್ರೆ ನೀಡಲಾಗುತ್ತಿದೆ ಎಂದು ಹೇಳಿದರು.

Join Whatsapp