ಪಂಜಾಬಿನ ಮಾಜಿ ಡಿಜಿಪಿ ದಿನಕರ್ ಗುಪ್ತಾ NIA ಮುಖ್ಯಸ್ಥರಾಗಿ ನೇಮಕ

Prasthutha|

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾರನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(NIA)ಯ ಮಹಾ ನಿರ್ದೇಶಕ (ಡಿಜಿಪಿ) ರಾಗಿ ನೇಮಿಸಲಾಗಿದೆ.1987ರ ಬ್ಯಾಚ್ ಇಂಡಿಯನ್ ಪೊಲೀಸ್ ಸರ್ವೀಸ್ ಅಧಿಕಾರಿಯಾಗಿರುವ ಗುಪ್ತಾ ಅವರು ಪಂಜಾಬ್ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

- Advertisement -

“ಮಾರ್ಚ್ 31, 2024 ರವರೆಗೆ ಎನ್‌ಐಎ ಮಹಾನಿರ್ದೇಶಕರಾಗಿ ಗುಪ್ತಾ ಅವರ ನೇಮಕಾತಿಯನ್ನು ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ, ಅದು ಅವರ ನಿವೃತ್ತಿಯ ದಿನಾಂಕವಾಗಿದೆ” ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಹಿರಿಯ ಅಧಿಕಾರಿ ದಿನಕರ್ ಗುಪ್ತಾರನ್ನು ಎನ್‌ಐಎ ಡಿಜಿಪಿಯಾಗಿ ನೇಮಿಸಲು ಕೇಂದ್ರ ಸರ್ಕಾರ ಗುರುವಾರ ಸಂಜೆ ಸಮ್ಮತಿಸಿದೆ.

ಸರಕಾರವು ಸ್ವಗರ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಆಗಿ ನೇಮಿಸಿದೆ. “ನವೆಂಬರ್ 30, 2024 ರವರೆಗೆ ದಾಸ್ ಅವರನ್ನು ಹುದ್ದೆಗೆ ನೇಮಿಸಲಾಗಿದೆ, ಅದು ಅವರ ನಿವೃತ್ತಿಯ ದಿನಾಂಕವಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

Join Whatsapp