ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಡೆಂಗ್ಯೂ: ವೈದ್ಯರಿಂದ ಮಾಹಿತಿ

Prasthutha|

ದೆಹಲಿ: ಅನಾರೋಗ್ಯದಿಂದ ದೆಹಲಿಯ ಏಮ್ಸ್ ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಡೆಂಗ್ಯೂ ಇದೆ ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಆದರೆ ಅಪಾಯವಿಲ್ಲ, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

ಮನಮೋಹನ್ ಸಿಂಗ್ ಅವರಿಗೆ ಬುಧವಾರ ರಾತ್ರಿ ಜ್ವರ, ಸುಸ್ತು ಕಾಣಿಸಿಕೊಂಡಿತ್ತು. ಅದಾದ ನಂತರ ಅವರನ್ನು ಏಮ್ಸ್ ನ ಕಾರ್ಡಿಯೋ-ನ್ಯೂರೋ ಸೆಂಟರ್ ನಲ್ಲಿರುವ ಖಾಸಗಿ ವಾರ್ಡ್ ಗೆ ದಾಖಲಿಸಲಾಗಿತ್ತು. ಹೃದ್ರೋಗ ತಜ್ಞರು ನಿಗಾವಹಿಸಿದ್ದರು. ಇದೀಗ ಅವರಲ್ಲಿ ಡೆಂಗ್ಯೂ ಇರುವುದು ಗೊತ್ತಾಗಿದ್ದು, ವೈದ್ಯ ನಿತೀಶ್ ನಾಯಕ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



Join Whatsapp