ಗುವಾಹಟಿ: ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಜನತಾ ದಳ(ಯುನೈಟೆಡ್) ಅಭ್ಯರ್ಥಿಯಾಗಿ ಮಾಜಿ ಪೊಲೀಸ್ ಅಧಿಕಾರಿ ತೌನೊಜಂ ಬೃಂದಾ ಸ್ಪರ್ಧಿಸಲಿದ್ದಾರೆ.
ತೌನೊಜಂ ಬೃಂದಾ ಅವರು ಭಾನುವಾರ ಜೆಡಿಯು ಸೇರ್ಪಡೆಯಾಗಿದ್ದು, ನಂತರ ಅವರನ್ನು ಇಂಫಾಲ್ ಕಣಿವೆಯ ಯೈಸ್ಕುಲ್ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಯಿತು.
ಜೆಡಿಯು ಉತ್ತಮ ಆಯ್ಕೆ ಎಂದು ನಾನು ನಂಬಿದ್ದೇನೆ. ನಾನು ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸಿ, ಆಡಳಿತ ಪಕ್ಷದ(ಬಿಜೆಪಿ) ಮಿತ್ರ ಪಕ್ಷ ಜೆಡಿಯುನಿಂದ ಸ್ಪರ್ಧಿಸಬೇಕೆಂದು ಜನರು ಬಯಸಿದ್ದರು ಎಂದು ಬೃಂದಾ ಅವರು ಹೇಳಿದ್ದಾರೆ.