ಮಾಜಿ ಶಾಸಕರಿಗೆ ಒಂದೇ ಅವಧಿಯ ಪಿಂಚಣಿ ಮಾತ್ರ ಲಭ್ಯ: ಪಂಜಾಬ್ ಮುಖ್ಯಮಂತ್ರಿ

Prasthutha|

ಚಂಡೀಗಡ್: ಪಂಜಾಬ್ ನ ಮಾಜಿ ಶಾಸಕರಿಗೆ ಪಿಂಚಣಿಗಳನ್ನು ಒಂದೇ ಅವಧಿಗೆ ಸೀಮಿತಗೊಳಿಸಲು, ಶಾಸಕರ ಕುಟುಂಬ ಭತ್ಯೆಗಳನ್ನು ಸಹ ಕಡಿತಗೊಳಿಸಲು ಮತ್ತು ಉಳಿಸಿದ ಹಣವನ್ನು ಜನರ ಕಲ್ಯಾಣಕ್ಕಾಗಿ ಖರ್ಚು ಮಾಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀರ್ಮಾನಿಸಿದ್ದಾರೆ.

- Advertisement -

ಇಲ್ಲಿಯವರೆಗೆ ಪಂಜಾಬ್ ನ ಮಾಜಿ ಶಾಸಕರು ಸೇವೆ ಸಲ್ಲಿಸಿದ ಪ್ರತಿ ಅವಧಿಗೆ ಪ್ರತ್ಯೇಕ ಪಿಂಚಣಿ ಪಡೆಯುತ್ತಿದ್ದರು, ಇದು ಪಂಜಾಬ್ ಸರ್ಕಾರದ ಬೊಕ್ಕಸಕ್ಕೆ ಕೋಟಿ ರೂಪಾಯಿಗಳ ಆರ್ಥಿಕ ಹೊರೆಯಾಗುತ್ತದೆ. “ಪಂಜಾಬ್ ನ ಮಾಜಿ ಶಾಸಕರು, ಎರಡು ಬಾರಿ, ಐದು ಬಾರಿ ಅಥವಾ 10 ಬಾರಿ ಗೆದ್ದಿದ್ದರೂ, ಈಗ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ” ಎಂದು ಮಾನ್ ಶುಕ್ರವಾರ ವೀಡಿಯೊ ಸಂದೇಶದ ಮೂಲಕ ಘೋಷಿಸಿದರು.

Join Whatsapp