ಉಳ್ಳಾಲದ ಮಾಜಿ ಶಾಸಕ, ದಿ. ಬಿ.ಎಂ.ಇದಿನಬ್ಬ ಪುತ್ರನ ಮನೆಗೆ ಎನ್ ಐ ಎ ದಾಳಿ!

Prasthutha|

ಮಂಗಳೂರು , ಆ. 4 : ಉಳ್ಳಾಲ ಕ್ಚೇತ್ರದ ಮಾಜಿ ಶಾಸಕ ದಿ. ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಇಂದು ಮಂಜಾನೆ ಎನ್‌ ಐ ಎ( ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ದಾಳಿ ನಡೆಸಿದ್ದಾರೆ . ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳು ಮನೆಗೆ ಬಂದು ಶೋಧ ಕಾರ್ಯ ಆರಂಭಿಸಿದ್ದಾರೆ. ಇದಿನಬ್ಬ ಅವರ ಪುತ್ರ ಬಿ.ಎಂ. ಭಾಷಾ ಎಂಬವರು ತಮ್ಮ ಕುಟುಂಬದ ಜೊತೆಗೆ ವಾಸವಿದ್ದ ಮನೆಗೆ ಎನ್‌ ಐ ಎ ದಾಳಿ ನಡೆಸಿದ್ದಾರೆ . ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

ನಾಲ್ಕು ಕಾರುಗಳಲ್ಲಿ 20 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿದೆ . ಎನ್‌ ಐ ಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದಾರೆ.

- Advertisement -

Join Whatsapp