ಬಾಂಗ್ಲಾದೇಶ ಪ್ರಜೆಗಳಿಗೆ ವಾಸ್ತವ್ಯ ಪ್ರಮಾಣಪತ್ರ| ಮಾಜಿ ಕೌನ್ಸಿಲರ್ ಬಂಧನ

Prasthutha|

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಕೌನ್ಸಿಲರೊಬ್ಬರನ್ನು ಬಾಂಗ್ಲಾದೇಶದ ಪ್ರಜೆಗಳಿಗೆ ವಾಸ್ತವ್ಯ ಪ್ರಮಾಣಪತ್ರಗಳನ್ನು ನೀಡಿದ ಆರೋಪಲ್ಲಿ ಬಂಧಿಸಲಾಗಿದೆ.

- Advertisement -

ವಾಸ್ತವ್ಯ ಪ್ರಮಾಣಪತ್ರ ಲಭಿಸಿದ ಬಾಂಗ್ಲಾದೇಶದ ಪ್ರಜೆಗಳು ಮತದಾರರ ಗುರುತಿನ ಚೀಟಿ ಮತ್ತು ಇತರ ಭಾರತೀಯ ದಾಖಲೆಗಳನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಕೌನ್ಸಿಲರ್ ಸಂಜಯ್ ಮೆಶಾಕ್ ಅವರು ಬಾಂಗ್ಲಾದೇಶ ಪ್ರಜೆ ನಯನ್ ಸರ್ಕಾರ್, ಅವರ ಸಹೋದರ ಮತ್ತು ಪೋಷಕರಿಗೆ ವಾಸ್ತವ್ಯ ಪ್ರಮಾಣಪತ್ರವನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ವೀಸಾ ಅವಧಿ ಮುಗಿದಿದ್ದರೂ ಬಾಂಗ್ಲಾ ದೇಶದ ಕುಟುಂಬ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಕ್ರಮವಾಗಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಸರ್ಕಾರ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸರ್ಕಾರ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಮಾಜಿ ಕೌನ್ಸಿಲರ್ ಸಂಜಯ್ ಮೆಶಾಕ್‌ ಅವರು ವಾಸ್ತವ್ಯ ಪ್ರಮಾಣಪತ್ರವನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಶಾಕ್ ಅವರನ್ನೂ ಬಂಧಿಸಲಾಗಿದೆ. ಈ ಕುರಿತು ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp