ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಸಮಿತಿ ರಚನೆಯಾಗಿದೆ. ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕೆನರಾ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಅಬ್ದುಲ್ ಕಲಾಂ ಸುಳ್ಯ ಮತ್ತು ಬಾಬು ಎನ್ ಸವಣೂರು ಆಯ್ಕೆಯಾಗಿದ್ದಾರೆ.
ಸವಣೂರು ಅಂಬೇಡ್ಕರ್ ಭವನದಲ್ಲಿ ನಡೆದ SDPI ಸುಳ್ಯ ವಿಧಾನಸಭಾ ಕ್ಷೇತ್ರದ ಮಧ್ಯಂತರ ಅಸ್ಸೆಂಬ್ಲಿ ಪ್ರತಿನಿಧಿ ಸಭೆಯಲ್ಲಿ ನೂತನ ಸಮಿತಿ ರಚನೆಯಾಗಿದೆ. ಸಮಿತಿಯ ಕಾರ್ಯದರ್ಶಿಯಾಗಿ ರಫೀಕ್ ಎಂ ಎ,ಜೊತೆ ಕಾರ್ಯದರ್ಶಿಯಾಗಿ ಶರೀಫ್ ನಿಂತಿಕಲ್, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಬೆಳ್ಳಾರೆ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಅಡ್ವಕೇಟ್ ಕಬೀರ್ ಆತೂರು, ರಝಾಕ್ ಸುಳ್ಯ, ಬಶೀರ್ ಆತೂರು ಹಾಗೂ ಅಶ್ರಫ್ ಟರ್ಲಿ ಆಯ್ಕೆಯಾದರು.
ಚುನಾವಣಾ ವೀಕ್ಷಕರಾಗಿ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಹಾಗೂ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ ಆಗಮಿಸಿ ಚುನಾವಣೆ ನಡೆಸಿಕೊಟ್ಟರು.