ವಿದೇಶಾಂಗ ನೀತಿ ಹಿಜಡಾ ಶೈಲಿಯಲ್ಲಿದೆ: ಕೇಂದ್ರ ಸಚಿವರ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಆಕ್ರೋಶ

Prasthutha|

ನವದೆಹಲಿ: ಕೇಂದ್ರ ಸರ್ಕಾರ ಹಿಜಡಾ ಶೈಲಿಯ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ವಿದೇಶಾಂಗ ಸಚಿವ ಜೈ ಶಂಕರ್ ವಿರುದ್ಧ ಕಿಡಿಕಾರಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು ಕ್ವಾಡ್, ಬ್ರಿಕ್ಸ್ ಸಭೆಗಳನ್ನು ಭಾಗವಹಿಸಲು ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕದಲ್ಲಿದ್ದು, ಈ ಕುರಿತ ಮಾಹಿತಿಯನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಪೋಸ್ಟ್ ಅನ್ನು ಸುಬ್ರಮಣಿಯನ್ ಸ್ವಾಮಿ ಅವರಿಗೆ ಟ್ಯಾಗ್ ಮಾಡಿ ಗಮನ ಸೆಳೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮಿ, ಇದು ಹಿಜಡಾ ವಿದೇಶಾಂಗ ನೀತಿ ಎಂದು ಕುಟುಕಿದ್ದಾರೆ.

ಈ ಹಿಂದೆಯೂ ಸುಬ್ರಮಣಿಯನ್ ಸ್ವಾಮಿ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ತರಾಟೆಗೆ ತೆಗೆದಿದ್ದು, ಜಿ – 7 ಶೃಂಗಸಭೆಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳಿದ್ದ ಜೈಶಂಕರ್ ಅವರನ್ನು ವೇಟರ್ ಎಂದು ಅವಮಾನ ಮಾಡಿದ್ದರು.

- Advertisement -

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತವನ್ನು ಜಗತ್ತಿನ ಎದುರು ತಲೆತಗ್ಗಿಸುವಂತೆ ಮಾಡಿದೆ. ಕಾರಣ ಲಡಾಖ್’ನಲ್ಲಿ ಚೀನಿಯರ ಉಪಟಲ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಅಲ್ಲದೆ ಭಾರತವು ರಷ್ಯಾದ ಎದುರು ಶರಣಾಗುತ್ತಿದೆ. ಕ್ವಾಡ್ ಸಭೆಯಲ್ಲಿ ಭಾರತ, ಅಮೆರಿಕದ ಎದುರು ಮಂಕಾಗಬೇಕಾಯಿತು. ಅಷ್ಟೇ ಯಾಕೆ ಕೊಲ್ಲಿ ರಾಷ್ಟ್ರ ಕತಾರ್ ಮುಂದೆ ಕೈಕಟ್ಟಿ ಕೂರಬೇಕಾಯಿತು. ಇದೆಲ್ಲ ನಮ್ಮ ವಿದೇಶಾಂಗ ನೀತಿಯಲ್ಲಿನ ಅಧಃಪತನದ ಕೆಲವು ಅಂಶಗಳು ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

Join Whatsapp