ಇಸ್ರೇಲ್’ ನಲ್ಲಿ ವಹಿವಾಟು ಸ್ಥಗಿತಗೊಳಿಸಲು ‘NIKE ‘ ನಿರ್ಧಾರ..!

Prasthutha|

ಲಂಡನ್ : ವಿಶ್ವದ ಪ್ರಮುಖ ಫ್ಯಾಷನ್ ಹಾಗೂ ಕ್ರೀಡಾ ಉತ್ಪನ್ನಗಳ ಬ್ರ್ಯಾಂಡ್ ಆಗಿರುವ ‘ನೈಕ್’, ಇಸ್ರೇಲ್’ ದೇಶದಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

- Advertisement -


ಇಸ್ರೇಲ್ ದೇಶದಲ್ಲಿರುವ ತನ್ನ ಎಲ್ಲಾ ಸ್ಟೋರ್ ಮಾಲೀಕರಿಗೆ ನೈಕ್ ಸಂಸ್ಥೆಯು ಈ ಕುರಿತು ಅಧಿಕೃತವಾಗಿ ಪತ್ರ ಬರೆದಿದ್ದು, ಮೇ 31, 2022ರಂದು ಇಸ್ರೇಲ್’ ನಲ್ಲಿನ ತಮ್ಮ ಉತ್ಪನ್ನಗಳ ಮಾರಾಟ ಪ್ರಕ್ರಿಯೆಯನ್ನು ಕೊನೆಗೊಳಿಸುವುದಾಗಿ ಹೇಳಿದೆ.”ಕಂಪನಿಯು ನಡೆಸಿದ ಸಮಗ್ರ ಪುನರವಲೋಕನ ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ರೀತಿಯನ್ನು ಪರಿಗಣಿಸಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ನಿಮ್ಮ ಜೊತೆಗಿನ ವ್ಯವಹಾರವು ಕಂಪನಿಯ ನೀತಿ ಹಾಗೂ ಗುರಿಗಳಿಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದೆ.


ಮೂಲಗಳ ಪ್ರಕಾರ ನೈಕ್ ತನ್ನ ಉತ್ಪನ್ನಗಳನ್ನು ತನ್ನದೇ ವೆಬ್ ಸೈಟ್ ಮೂತಲಕ ಮಾರಾಟ ಮಾಡಲು ಹೆಚ್ಚು ಒತ್ತು ನೀಡಲಿದ್ದು, ಇದರ ಭಾಗವಾಗಿ ಹಂತಹಂತವಾಗಿ ಮಾಲ್ ‘ಗಳಲ್ಲಿರುವ ತನ್ನ ಔಟ್’ ಲೆಟ್’ಗಳನ್ನು ಮುಚ್ಚುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ.ಇಸ್ರೇಲ್’ನಲ್ಲಿ ನೈಕ್ ಬಹುಬೇಡಿಕೆಯ ಬ್ರ್ಯಾಂಡ್ ಆಗಿದೆ. ನೈಕ್’ ನ ಹೊಸ ನಿರ್ಧಾರದಿಂದಾಗಿ ಇಸ್ರೇಲ್’ ನಲ್ಲಿ ನೈಕ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಇದು ಗ್ರಾಹಕರ ಪಾಲಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಲಿದೆ.ಆನ್ ಲೈನ್ ದೈತ್ಯ ಅಮೆಜಾನ್ ಜೊತೆಗಿನ ತನ್ನ ವಹಿವಾಟನ್ನು 2019ರಲ್ಲೇ ನೈಕ್ ಸ್ಥಗಿತಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Join Whatsapp