ವಿಮಾನದಲ್ಲಿ ನಟಿ ಮೇಲೆ ಲೈಂಗಿಕ ದೌರ್ಜನ್ಯ| ಉದ್ಯಮಿ ಬಂಧನ

Prasthutha|

ಮುಂಬೈ: ದೆಹಲಿ-ಮುಂಬೈ ವಿಮಾನದಲ್ಲಿ ನಟಿಗೆ ಕಿರುಕುಳ ನೀಡಿದ ಉದ್ಯಮಿಯೊಬ್ಬನನ್ನು ಬಂಧಿಸಲಾಗಿದೆ.

- Advertisement -

ಬಂಧಿತ ಉದ್ಯಮಿಯನ್ನು ಗಾಜಿಯಾಬಾದ್ ಮೂಲದ ನಿತಿನ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 14 ರಂದು ಸಹಾರ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು.

ದೆಹಲಿಯಿಂದ ವಿಮಾನದಲ್ಲಿ ಮುಂಬೈಗೆ ಹಿಂತಿರುಗುತ್ತಿದ್ದ ನಟಿ ತನ್ನ ಹ್ಯಾಂಡ್ ಬ್ಯಾಗ್ ಅನ್ನು ಹೊರತೆಗೆಯಲು ಓವರ್ ಹೆಡ್ ಸ್ಟೋರೇಜ್ ತೆರೆಯುತ್ತಿದ್ದಾಗ ಉದ್ಯಮಿ ಅನುಚಿತವಾಗಿ ಸ್ಪರ್ಶಿಸಿ ತನ್ನತ್ತ ಹಿಡಿದು ಎಳೆಯಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

ಈ ಕುರಿತು ನಟಿ ಕ್ಯಾಬಿನ್ ಸಿಬ್ಬಂದಿಯ ಗಮನಕ್ಕೆ ತಂದಿದ್ದು, ಅವರು ಕಸ್ಟಮರ್ ರಿಲೇಶನ್ ತಂಡಕ್ಕೆ ದೂರು ನೀಡಲು ಸೂಚಿಸಿದ್ದಾರೆ. ನಂತರ ನಟಿ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Join Whatsapp