ಚೆನ್ನೈ: 334 ವರ್ಷಗಳ ಬಳಿಕ ಮೊದಲ ದಲಿತ ಮಹಿಳೆ ಮೇಯರ್ ಆಗಿ ಆಯ್ಕೆ

Prasthutha|

ಚೆನ್ನೈ: ಡಿಎಂಕೆ ಪಕ್ಷದ ಆರ್. ಪ್ರಿಯಾ (28) ಎಂಬವರು ಇಂದು ಅತ್ಯಂತ ಕಿರಿಯ ಮತ್ತು ಮೊದಲ ದಲಿತ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

- Advertisement -

ತಾರ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಜನ್ ಬಳಿಕ ಪ್ರಿಯಾ ಅವರು ಚೆನ್ನೈ ಪಾಲಿಕೆಯ ಮೂರನೇ ಮತ್ತು ಮೊದಲ ದಲಿತ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್ ಹುದ್ದೆಯನ್ನು ಮೀಸಲಿಡುವ ಆದೇಶವನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಆರ್. ಪ್ರಿಯಾ ಅವರು ಮೊದಲ ದಲಿತ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

- Advertisement -

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಆರ್. ಪ್ರಿಯಾ ಅವರು ಮಂಗಳಾಪುರದ ವಾರ್ಡ್ ಸಖ್ಯೆ 74 ರಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಪ್ರಿಯಾ, ಮುಖ್ಯಮಂತ್ರಿ ಎಂ.ಕೆ ಸ್ಟಾಲಿಕ್ ಮಹತ್ವದ ಸಾಮಾಜಿಕ ಬದಲಾವಣೆ ತರುವುದನ್ನು ನಿರೀಕ್ಷೆಯಲ್ಲಿದ್ದ ನನಗೆ ಈ ಅವಕಾಶ ಲಭಿಸಿದೆ.ಪ್ರಸಕ್ತ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆಗೊಳಿಸಲಾಗುವುದೆಂದು ತಿಳಿಸಿದ್ದಾರೆ.

ಮೂಲತಃ ಚೆನ್ನೈ ನಿವಾಸಿಯಾದ ಪ್ರಿಯಾ ಅವರು ಶ್ರೀ ಕನ್ಯನಾ ಪರಮೇಶ್ವರಿ ಆರ್ಟ್ಸ್ ಕಾಲೇಜ್ ಫಾರ್ ವುಮೆನ್ ಕಾಲೇಜಿನಲ್ಲಿ ಪದವಿ ಎಮ್. ಕಾಂ ಪದವೀಯನ್ನು ಪೂರ್ತಿಗೊಳಿಸಿದ್ದರು.

ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 21 ಮುನ್ಸಿಪಲ್ ಸೀಟ್ ಗಳ ಪೈಕಿ ಡಿಎಂಕೆ ಬಹುಮತವನ್ನು ಪಡೆದುಕೊಂಡಿದೆ ಮತ್ತು 138 ಪುರಸಭೆ, 490 ಪಟ್ಟಣ ಪಂಚಾಯತ್ ಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿದೆ.

Join Whatsapp