ಆರ್ಥಿಕವಾಗಿ ಹಿಂದುಳಿದ ಹಾಗೂ ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

Prasthutha|

ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಪನಾಮ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ 50 ಲಕ್ಷ ಮೀಸಲು : ವಿವೇಕ್ ರಾಜ್ ಪೂಜಾರಿ

- Advertisement -

ಮಂಗಳೂರು : ಪನಾಮ ಕಾರ್ಪೋರೇಷನ್ ಲಿಮಿಟೆಡ್, ಮಂಗಳೂರು ಹಾಗೂ ರೋಟರಿ ಕ್ಲಬ್, ಮಂಗಳೂರು ಉತ್ತರ ಇವರ ಸಹಯೋಗದೊಂದಿಗೆ ಕೊರೋನಾ ಹಿನ್ನಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ರೀಡಾಪಟುಗಳಿಗೆ ಹಾಗೂ ಕಷ್ಟ ಪರಿಸ್ಥಿತಿಯಲ್ಲಿರುವ ಮಾಜಿ ಕ್ರೀಡಾಪಟುಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮವನ್ನು ರೋಟರಿ ಬಾಲ ಭವನ, ಮಂಗಳೂರು ಅಲ್ಲಿ ನಿನ್ನೆ ಆಯೋಜಿಸಲಾಗಿತ್ತು.

ಆಹಾರ ಧಾನ್ಯಗಳ ಕಿಟ್‌ನ ಸಂಪೂರ್ಣ ವೆಚ್ಚವನ್ನು ಕೊಡುಗೆ ದಾನಿಗಳಾದ ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಸಿ.ಇ.ಒ ಶ್ರೀ ವಿವೇಕ್ ರಾಜ್ ಪೂಜಾರಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ 35 ಕ್ರೀಡಾಪಟುಗಳು ಹಾಗೂ 12 ಮಾಜಿ ಕ್ರೀಡಾಪಟುಗಳಿಗೆ ಆಹಾರ ಧಾನ್ಯಗಳ ಕಿಟ್ ಅನ್ನು ಶ್ರೀ ವಿವೇಕ್ ರಾಜ್ ಪೂಜಾರಿ ರವರು ವಿತರಿಸಿದರು. ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಪನಾಮ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ 50 ಲಕ್ಷಗಳ ರುಪಾಯಿ ನಿಧಿಯನ್ನು ಮೀಸಲಿಡಲಾಗಿದ್ದು, ಕ್ರೀಡಾ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಶ್ಯಕವಿರುವ ಪ್ರಯಾಣ ವೆಚ್ಚವನ್ನು ಭರಿಸಲು ಸದರಿ ನಿಧಿಯನ್ನು ಜಿಲ್ಲೆಯ ಕ್ರೀಡಾಪಟುಗಳು ಬಳಸಿಕೊಳ್ಳಬಹುದಾಗಿದೆ ಎಂದು ಶ್ರೀ ವಿವೇಕ್ ರಾಜ್ ಪೂಜಾರಿ ರವರು ತಿಳಿಸಿದರು.

- Advertisement -

ಇದರೊಂದಿಗೆ ಶ್ರೀ ಹೆರಾಲ್ಡ್ ಪಾಯ್ಸ್, ಮಾಜಿ ಪವರ್ ಲಿಪ್ಟರ್ ಇವರ ನಿವಾಸಕ್ಕೆ ತೆರಳಿ ಆಹಾರ ಧಾನ್ಯಗಳ ಕಿಟ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ್ ಡಿ’ಸೋಜ, ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ. ಜಿಲ್ಲೆ, ಶ್ರೀ ವಿಶ್ವನಾಥ ಶೆಟ್ಟಿ, ಅಧ್ಯಕ್ಷರು, ರೋಟರಿ ಬಾಲ ಭವನ ಮಂಗಳೂರು, ಶ್ರೀ ಗಣೇಶ್ ಕೃಷ್ಣ ಭಟ್, ಕಾರ್ಯದರ್ಶಿ, ರೋಟರಿ ಕ್ಲಬ್ ಮಂಗಳೂರು ಉತ್ತರ, ಶ್ರೀ ಮಹೇಶ್ ಕೋಡಿಕಲ್ ಹಾಗೂ ಡಾ. ವಸಂತ ಕುಮಾರ್, ಅಥ್ಲೆಟಿಕ್ಸ್ ಹಿರಿಯ ತರಬೇತುದಾರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲೆ ಮತ್ತಿತರರು ಉಪಸ್ಥಿತರಿದ್ದರು.

Join Whatsapp