► ಹರೇಕಳದ ನ್ಯೂಪಡ್ಪು, ಕಿಸಾನ್ ನಗರ, RG ನಗರ ಮತ್ತು ಕಡವಿನ ಬಳಿಯಲ್ಲಿ ಸಂಸ್ಥಾಪನಾ ದಿನಾಚರಣೆ
ಹರೇಕಳ : SDPI ಹರೇಕಳ ಗ್ರಾಮ ಸಮಿತಿ ಅಧೀನದಲ್ಲಿ ಪಕ್ಷದ 15ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಹರೇಕಳ ಗ್ರಾಮದ ವಿವಿಧ ಭಾಗಗಳಲ್ಲಿ ಬೂತ್ ಸಮಿತಿ ಅಧೀನದಲ್ಲಿ ಮತ್ತು ಗ್ರಾಮ ಸಮಿತಿ ಅಧೀನದಲ್ಲಿ ಹಮ್ಮಿಕೊಳ್ಳಲಾಯಿತು.
15ನೇ ಜೂನ್ 2023 ರಂದು ಎಸ್ಡಿಪಿಐ ಪಕ್ಷವು 15ನೇ ವಸಂತಕ್ಕೆ ಪಾದಾರ್ಪಣೆಗೊಳ್ಳಲಿದ್ದು, ನಾಡಿನ ಸರ್ವರಿಗೂ ಎಸ್ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಶುಭಾಶಯಗಳನ್ನು ಕೋರುತ್ತೇವೆ.
ಫರೀದ್ ನಗರ ಬೂತ್ ಸಮಿತಿ ವತಿಯಿಂದ ಕಿಸಾನ್ ನಗರದಲ್ಲಿ ದ್ವಜಾರೋಹಣ
ಹರೇಕಳ ಗ್ರಾಮ ಸಮಿತಿ ಅಧೀನದ ಫರೀದ್ ನಗರ ಬೂತ್ ಸಮಿತಿ ಅಧೀನದಲ್ಲಿ ಕಿಸಾನ್ ನಗರದಲ್ಲಿ ಬೆಳಗ್ಗೆ 7 ಗಂಟೆಗೆ ಸಂಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಫರೀದ್ ನಗರ ಬೂತ್ ಸಮಿತಿ ಅಧ್ಯಕ್ಷ ಫಾರೂಕ್ ರವರು ದ್ವಜಾರೋಹಣ ನೆರೆವೇರಿಸಿ, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಬಶೀರ್ SM ರವರು ಶುಭ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಬೂತ್ ಸಮಿತಿ ಕಾರ್ಯದರ್ಶಿ ಹುಸೈನ್, ಆಸ್ಬಕ್, ಸ್ವದಕ, ಹಿರಿಯರಾದ ಪುತ್ತಾಕ ಮತ್ತು ಫರೀದ್ ನಗರ ಬೂತ್ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿಯಿದ್ದರು.
RG ನಗರ ಬೂತ್ ಸಮಿತಿ ವತಿಯಿಂದ ಮಿಷನ್ ಕಂಪೌಂಡ್ ನಲ್ಲಿ ದ್ವಜಾರೋಹಣ
ಪಕ್ಷದ 15ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ RG ನಗರ ಬೂತ್ ಸಮಿತಿ ವತಿಯಿಂದ ಮಿಷನ್ ಕಂಪೌಂಡ್ ನಲ್ಲಿರುವ ಬಸ್ ತಂಗುದಾಣ ಮುಂಭಾಗ ಬೆಳಿಗ್ಗೆ 7.30ಕ್ಕೆ ದ್ವಜಾರೋಹಣ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ದ್ವಜಾರೋಹಣವನ್ನು ಬೂತ್ ಸಮಿತಿ ಅಧ್ಯಕ್ಷ ಶಾಜುದ್ದೀನ್ ನೆರೆವೇರಿಸಿದರು. ಎಸ್ಡಿಪಿಐ ಮುನ್ನೂರು ಬ್ಲಾಕ್ ಸಮಿತಿ ಅಧ್ಯಕ್ಷ ಮತ್ತು ಹರೇಕಳ ಪಂಚಾಯತ್ ಸದಸ್ಯ ಅಬ್ದುಲ್ ಬಶೀರ್ SM ಮತ್ತು ಗ್ರಾಮ ಸಮಿತಿ ಕೋಶಾಧಿಕಾರಿ ರಝಕ್ ದೆಬ್ಬೇಲಿ ಇನ್ನಿತರ ಕ್ಯಾಡೆರ್ಗಳು ಉಪಸ್ಥಿತಿಯಿದ್ದರು.
ನ್ಯೂಪಡ್ಪು ಬೂತ್ ಸಮಿತಿ ವತಿಯಿಂದ ನ್ಯೂಪಡ್ಪು ಜಂಕ್ಷನ್ ನಲ್ಲಿ ದ್ವಜಾರೋಹಣ
15ನೇ ವರ್ಷದೆಡೆಗೆ ಸ್ವಾಭಿಮಾನಿ ಮತ್ತು ಜನಪರ ರಾಜಕೀಯದ ದಿಟ್ಟ ಹೆಜ್ಜೆಗಳು ಎಂಬ ಘೋಷವಾಕ್ಯದಡಿ ನಡೆಯುತ್ತಿರುವ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಹರೇಕಳದ ಹೃದಯ ಭಾಗ ನ್ಯೂಪಡ್ಪುನಲ್ಲಿ ದ್ವಜಾರೋಹಣ ಕಾರ್ಯಕ್ರಮವನ್ನು ಬೆಳಿಗ್ಗೆ 8 ಗಂಟೆಗೆ ಹಮ್ಮಿಕೊಳ್ಳಲಾಯಿತು.
ನ್ಯೂಪಡ್ಪು ಬೂತ್ ಸಮಿತಿ ಅಧ್ಯಕ್ಷ ಅಸೀಫ್ ಆಚಿ ದ್ವಜಾರೋಹಣ ನೆರೆವೇರಿಸಿದರು. ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಅಸೀಫ್ ಶುಭ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಬೂತ್ ಸಮಿತಿ ಉಪಾಧ್ಯಕ್ಷ ಆರೀಸ್ ಝೋಯಾ, ಪಕ್ಷದ ಹಿರಿಯ ಸದಸ್ಯ ಮುಹಮ್ಮದ್ ಮೋನು, ಗ್ರಾಮ ಸಮಿತಿ ಕೋಶಾಧಿಕಾರಿ ರಝಕ್ ದೆಬ್ಬೇಲಿ ಮತ್ತು ಎಸ್ಡಿಪಿಐ ಕಾರ್ಯಕರ್ತರು ಉಪಸ್ಥಿತಿಯಿದ್ದರು.
ಹರೇಕಳ ಗ್ರಾಮ ಸಮಿತಿ ವತಿಯಿಂದ ಕಡವಿನ ಬಳಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ
ಎಸ್ಡಿಪಿಐ ಹರೇಕಳ ಗ್ರಾಮ ಸಮಿತಿ ಮತ್ತು ಎಸ್ಡಿಪಿಐ ಬೈತಾರ್ ಬೂತ್ ಸಮಿತಿ, ದೇರಿಕಟ್ಟೆ ಬೂತ್ ಸಮಿತಿ ಹಾಗು ಆಲಡ್ಕ ಬೂತ್ ಸಮಿತಿ ವತಿಯಿಂದ ಜಂಟಿಯಾಗಿ ನೇತ್ರಾವತಿ ನದಿ ತಟದ ಕಡವಿನ ಬಳಿಯಲ್ಲಿ ಬೆಳಿಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಯಿತು. ದ್ವಜಾರೋಹಣ ಕಾರ್ಯವನ್ನು ದೇರಿಕಟ್ಟೆ ಬೂತ್ ಸಮಿತಿ ಉಪಾಧ್ಯಕ್ಷ ನಝೀರ್ ನೆರೆವೇರಿಸಿದರು.
ಸಂಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಅಸೀಫ್ ರವರು ಪಕ್ಷವು ತನ್ನ ಹುಟ್ಟಿನಿಂದ ಇಂದಿನವರೆಗೆ ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ರೀತಿಯ ಅಪಪ್ರಚಾರ ಆರೋಪಕ್ಕೆ ದೃತಿಗೆಡದೆ ಕಾನೂನಾತ್ಮಕ ಹೋರಾಟವನ್ನು ಸಂಘಟಿಸುತ್ತಾ 15ನೇ ವಸಂತಕ್ಕೆ ಪಾದಾರ್ಪಣೆಗೊಂಡಿದ್ದು, ಇನ್ನು ಮುಂದಿನ ದಿನಗಳಲ್ಲಿಯೂ ಹಸಿವು ಮುಕ್ತ ಭಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕಟಿಬದ್ದವಾಗಿರಲಿದೆ ಎಂಬ ಶುಭ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಕಾರ್ಯದರ್ಶಿ ಇಬ್ರಾಹಿಂ , ಬೈತಾರ್ ಬೂತ್ ಸಮಿತಿ ಕಾರ್ಯದರ್ಶಿ ಮುಹಮ್ಮದ್, ದೇರಿಕಟ್ಟೆ ಬೂತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ , ಕಾರ್ಯದರ್ಶಿ ಸಾಧಿಕ್, ಮಾಝಿನ್ ಇನ್ನಿತರ ಕಾರ್ಯಕರ್ತರು ಉಪಸ್ಥಿತಿಯಿದ್ದರು