ಬಾಲಕಿಯ ಮೇಲೆ 3 ಬೀದಿ ನಾಯಿಗಳು ದಾಳಿ

Prasthutha|

ಕಣ್ಣೂರು: ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇದ್ದು, 3 ಬೀದಿ ನಾಯಿಗಳು ಬಾಲಕಿ ಮೇಲೆ ದಾಳಿ ನಡೆಸಿದ ಘಟನೆ ಕಣ್ಣೂರು ಜಿಲ್ಲೆಯ ಮುಜ್ಜಪಿಲಂಗಾಡಿನಲ್ಲಿ ನಡೆದಿದೆ.

- Advertisement -


3 ಬೀದಿ ನಾಯಿಗಳು ಬಾಲಕಿ ಮೇಲೆ ದಾಳಿ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗಾ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


8 ವರ್ಷದ ಜಾನ್ವಿ ತನ್ನ ಮನೆಯ ಅಂಗಳದಲ್ಲಿ ಇದ್ದಾಗ ಮೂರು ನಾಯಿಗಳು ಆಕೆಯ ಮೇಲೆ ದಾಳಿ ಮಾಡಿದೆ. ನೋವು ತಾಳಲಾರದೇ ಬಾಲಕಿ ಕಿರುಚಲು ಪ್ರಾರಂಭಿಸಿದ್ದಾಳೆ. ಕೆಲ ಹೊತ್ತಿನಲ್ಲೇ ಸ್ಥಳೀಯರು ಬಾಲಕಿಯ ಸಹಾಯಕ್ಕೆ ಬಂದಿದ್ದಾರೆ. ಬಾಲಕಿಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -