ಕಾಮನ್‌ವೆಲ್ತ್ ಗೇಮ್ಸ್ ಎತ್ತರ ಜಿಗಿತದಲ್ಲಿ ಭಾರತಕ್ಕೆ ಮೊದಲ ಪದಕ

Prasthutha: August 5, 2022

ಬರ್ಮಿಂಗ್ಹ್ಯಾಮ್‌‌: ಕಾಮನ್‌ವೆಲ್ತ್ ಗೇಮ್ಸ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ತೇಜಸ್ವಿನ್ ಶಂಕರ್ ಕಂಚು ಗೆದ್ದು ದಾಖಲೆ ಬರೆದರು. ಏಕೆಂದರೆ ಭಾರತಕ್ಕೆ ಈ ಪಂದ್ಯಾವಳಿಯಲ್ಲಿ ಮತ್ತು ಅಂತರರಾಷ್ಟ್ರೀಯವಾಗಿ ಇದು ಮೊದಲ ಹೈಜಂಪ್ ಪದಕವಾಗಿದೆ.

ಮೂರನೆಯ ಸ್ಥಾನ ನಿರ್ಣಯಕ್ಕೆ ನಡೆದ ಎತ್ತರ ಜಿಗಿತದಲ್ಲಿ ಇಂಗ್ಲೆಂಡಿನ ಜೋಯೆಲ್ ಕ್ಲರ್ಕ್ ಸಹ ತೇಜಸ್ವಿನ್‌ರಂತೆಯೇ 2.22 ಮೀಟರ್ ಎತ್ತರ ಜಿಗಿದರು. ಜೋಯೆಲ್ ಎರಡನೇ ಪ್ರಯತ್ನದಲ್ಲಿ ಅಷ್ಟು ಜಿಗಿದರೆ ತೇಜಸ್ವಿನ್ ಮೊದಲ ಪ್ರಯತ್ನದಲ್ಲೇ ಆ ಎತ್ತರ ಹಾರಿದ್ದರಿಂದ ಪೈಪೋಟಿಯಿಂದ ಕಂಚು ದಕ್ಕಿಸಿಕೊಂಡರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ