22ನೇ ಕಾಮನ್‌ವೆಲ್ತ್ ಗೇಮ್ಸ್: ಇನ್ನು ಮೂರು ದಿನ, ಏಳನೇ ಸ್ಥಾನದಲ್ಲಿ ಭಾರತ

Prasthutha|

ಬರ್ಮಿಂಗ್ಹ್ಯಾಮ್‌‌: ಬ್ರಿಟನ್ನಿನ ಬರ್ಮಿಂಗ್ಹ್ಯಾಮ್‌‌ನಲ್ಲಿ ನಡೆಯುತ್ತಿರುವ 22ನೇ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ  ಭಾರತವು ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆಗಸ್ಟ್ 8ನೇ ತಾರೀಕು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಮುಕ್ತಾಯ ಕಾಣುತ್ತದೆ.

- Advertisement -

72 ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳು ಇದರಲ್ಲಿ ಭಾಗವಹಿಸುತ್ತಿವೆ. 20 ಆಟೋಟಗಳ 280 ಬಗೆಯ ಸ್ಪರ್ಧೆಗಳು ನಡೆಯುತ್ತಲಿವೆ. 5,054 ಮಂದಿ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದಾರೆ.

6 ಚಿನ್ನ, 7 ಬೆಳ್ಳಿ, 7 ಕಂಚಿನ ಪದಕದೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

- Advertisement -

ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು 50- 42- 40 ಗೆದ್ದ ಆಸ್ಟ್ರೇಲಿಯಾ, 42- 44- 32 ಗೆದ್ದ ಇಂಗ್ಲೆಂಡ್, 17- 20- 22 ಗೆದ್ದ ಕೆನಡಾ  ಮೊದಲ ಮೂರು ಸ್ಥಾನಗಳಲ್ಲಿ ಇವೆ. ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳು  ‌ನಾಲ್ಕಯ್ದಾರನೆ ಸ್ಥಾನದಲ್ಲಿವೆ.

Join Whatsapp