ಕೋವಿಡ್-19 ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್

Prasthutha|

ರಿಯಾಧ್ : ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ದೇಶದ ಕೊರೊನ ವೈರಸ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ. ಸೌದಿ ಅರೇಬಿಯಾ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಭಾಗವಾಗಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ.

- Advertisement -

ಸೌದಿ ನಿವಾಸಿಗಳಿಗೆ ಮತ್ತು ನಾಗರಿಕರಿಗೆ ಲಸಿಕೆ ಪೂರೈಸುವ ಬಗ್ಗೆ ಅತ್ಯಂತ ಉತ್ಸಾಹ ತೋರಿದ ಮತ್ತು ಸತತ ಪ್ರಯತ್ನಿಸಿದ ಯುವರಾಜನಿಗೆ ಆರೋಗ್ಯ ಸಚಿವ ತೌಫೀಕ್ ಅಲ್ ರಬಿಯಾಹ್ ಧನ್ಯವಾದ ಸಲ್ಲಿಸಿದ್ದಾರೆ.

ಸರಕಾರ ತನ್ನ ಪ್ರಜೆಗಳಿಗೆ ಸುರಕ್ಷಿತ ಮತ್ತು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಲಸಿಕೆಯನ್ನು ದಾಖಲೆ ಸಮಯದಲ್ಲಿ ಪೂರೈಸಲು ಕೆಲಸ ಮಾಡಿದೆ. ಇದು ಕೊರೊನ ವೈರಸ್ ಪಿಡುಗಿನ ವಿರುದ್ಧದ ಹೋರಾಟ ನಡೆಸಿರುವ ಜಗತ್ತಿನ ಅತ್ಯುತ್ತಮ ದೇಶಗಳಲ್ಲಿ ಸೌದಿ ಕೂಡ ಒಂದು ಎಂದು ಗುರುತಿಸುವಲ್ಲಿ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಕೋವಿಡ್ 19 ಲಸಿಕೆ ಪಡೆಯಲು ಈಗಾಗಲೇ 5 ಲಕ್ಷ ಸದಸ್ಯರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.   



Join Whatsapp