ಹೊಸದಾಗಿ ತಿದ್ದುಪಡಿ ಮಾಡಿದ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ 2021 ರ ಅಡಿಯಲ್ಲಿ ಗುಜರಾತ್‌ನಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಏಳು ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಈ ಕಾಯ್ದೆಯಡಿ ವಿವಾಹದ ಮೂಲಕ ಬಲವಂತದ ಧಾರ್ಮಿಕ ಮತಾಂತರಕ್ಕೆ ಕಠಿಣ ದಂಡನೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಆರೋಪಿ ಮಟನ್ ಅಂಗಡಿ ಮಾಲೀಕರಾಗಿರುವ 26 ವರ್ಷದ ಸಮೀರ್ ಖುರೇಷಿ ಎಂಬವರು 2018 ರಲ್ಲಿ ತನ್ನನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಯಾಮ್ ಮಾರ್ಟಿನ್ ಎಂದು ಪರಿಚಯಿಸಿಕೊಂಡು ಆಮಿಷವೊಡ್ಡಿ ಮದುವೆಯಾಗಿದ್ದಾರೆ ಎಂದು ಸಂತ್ರಸ್ತೆ ವಡೋದರಾದ ಗೋತ್ರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮದುವೆಯ ನಂತರ ತನಗೆ “ಆಧುನಿಕ ಜೀವನ”ದ ವಾಗ್ದಾನ ನೀಡುವ ಮೂಲಕ ದೈಹಿಕ ಸಂಪರ್ಕ ಹೊಂದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ಸಮೀರ್ ಖುರೇಷಿಯ ತಂದೆ ಅಬ್ದುಲ್ ಖುರೇಷಿ, ತಾಯಿ ಫರಿದಾ, ಮತ್ತು ಸಹೋದರಿ ರುಕ್ಸಾರ್ ಮತ್ತು ಚಿಕ್ಕಪ್ಪ ಅಲ್ತಾಫ್ ಚೌಹಾನ್ ಮತ್ತು ಮೆಹರ್ ಮಲ್ಲಿಕ್ ಎಂಬವರನ್ನು ಆರೋಪಿಗಳಾಗಿಸಿ ವಡೋದರಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.