ಮಾಜಿ ಸಚಿವರಿಗೆ ಸಂಚಾರಿ ವಿಜಯ್ ಸ್ಫೂರ್ತಿ | ದೇಹದಾನಕ್ಕೆ ಅಭಯಚಂದ್ರ ಜೈನ್ ನಿರ್ಧಾರ

Prasthutha: June 18, 2021

ಮಂಗಳೂರು : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿನ ಬಳಿಕ ಅವರ ಅಂಗಾಂಗ ದಾನ ಮಾಡಿ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದರು. ಸಂಚಾರಿ ವಿಜಯ್‌ರಿಂದ ಸ್ಫೂರ್ತಿಗೊಂಡು ತಮ್ಮ ದೇಹದಾನ ಮಾಡಲು ಮಾಜಿ ಸಚಿವ ಅಭಯ್ ಚಂದ್ರ ಜೈನ್ ನಿರ್ಧರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಚಾರಿ ವಿಜಯ್ ಶೃದ್ಧಾಂಜಲಿ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದ್ದಾರೆ.

ಈ ಹಿಂದೆಯೇ ದೇಹದಾನ ಮಾಡುವ ಬಗ್ಗೆ ಆಲೋಚಿಸಿದ್ದೆ. ಆದರೆ, ಸಂಚಾರಿ ವಿಜಯ್ ಅವರ ಅಂಗಾಂಗದಾನದ ಬಳಿಕ ನನ್ನ ಮರಣಾ ನಂತರವು ಅಂಗಾಂಗ ದಾನವಾಗಬೇಕು ಎಂದು ನಿರ್ಧರಿಸಿದ್ದೇನೆ. ದೇಹದ ಎಲ್ಲಾ ಭಾಗಗಳು ದಾನವಾಗುವ ಬಗ್ಗೆ ನಿರ್ಧರಿಸಿ ದೇಹದಾನ ಮಾಡಲು ಆಲೋಚಿಸಿದ್ದೇನೆ ಎಂದರು.

ತಾನು ಜೈನ ಧರ್ಮಿಯನಾಗಿರುವುದರಿಂದ ಮತ್ತು ಮರಣಾನಂತರ ಮನೆಯವರು ದೇಹದಾನ ಮಾಡಲು ಹಿಂಜರಿಯಬಾರದು ಎಂಬ ನೆಲೆಯಲ್ಲಿ ಅದಕ್ಕಾಗಿ ಕಾನೂನು ಪತ್ರವನ್ನು ಮಾಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಇತರರಿಗೆ ಅನುಕೂಲವಾಗುವಂತೆ ಅಂಗಾಂಗ ದಾನ ಮಾಡಲು ನಿರ್ಧಾರ ತೆಗೆದುಕೊಳ್ಳುವಂತೆ ಕರೆ ನೀಡಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ