ಐವರು ಉದ್ಯೋಗಿಗಳಿಗೆ ಕೋಟಿ ಬೆಲೆ ಬಾಳುವ BMW ಕಾರು ಗಿಫ್ಟ್ ನೀಡಿದ ‘ಕಿಸ್‌ಫ್ಲೋ’

Prasthutha|

ಚೆನ್ನೈ: ಕೋವಿಡ್ ನಂತರದಲ್ಲಿ ಬಹುತೇಕ ಎಲ್ಲಾ ವಲಯಗಳಲ್ಲೂ ಉದ್ಯೋಗ ಕಡಿತ, ಸಂಬಳ ಕಡಿತಕ್ಕೆ ಕಂಪನಿಗಳು ಮುಂದಾಗಿದೆ. ಆದರೆ ಜಾಗತಿಕವಾಗಿ ಸಾಫ್ಟ್‌ವೇರ್‌ ಸೇವೆ ಒದಗಿಸುವ ಚೆನ್ನೈ ಮೂಲದ ಕಂಪನಿಯೊಂದು ತನ್ನ ಐದು ಹಿರಿಯ ಉದ್ಯೋಗಿಳಿಗೆ ಕೋಟಿ ಬೆಲೆಬಾಳುವ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಮಾದರಿಯಾಗಿದೆ
ಕಂಪನಿಗೆ ತೋರಿದ ನಿಷ್ಠೆ ಮತ್ತು ಬದ್ಧತೆಯನ್ನು ಗೌರವಿಸಿ ಸಂಸ್ಥೆಯ ನಿರ್ವಹಣಾ ವಿಭಾಗದ ಐದು ಮಂದಿ ಉದ್ಯೋಗಿಗಳಿಗೆ ತಲಾ ಒಂದು ಕೋಟಿ ರೂಪಾಯಿ ಬೆಲೆಬಾಳುವ BMW 530D ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ‘ಕಿಸ್‌ಫ್ಲೋ’ ಕಂಪನಿಯ CEO ಸುರೇಶ್‌ ಸಂಬಂದಂ ಹೇಳಿದ್ದಾರೆ. ಕಾರುಗಳನ್ನು ಉಡುಗೊರೆಯಾಗಿ ನೀಡುವ ವಿಚಾರವನ್ನು ಗೌಪ್ಯವಾಗಿಡಲಾಗಿತ್ತು. ಸರಳ ಸಮಾರಂಭಕ್ಕೂ ಕೆಲ ಗಂಟೆಗಳ ಮೊದಲು ಈ ಅಚ್ಚರಿಯ ಸಂಗತಿಯನ್ನು ಬಹಿರಂಗಗೊಳಿಸಲಾಗಿತ್ತು. ಐಷರಾಮಿ ಕಾರುಗಳ ಕೀ ಹಸ್ತಾಂತರ ಕಾರ್ಯಕ್ರಮಕ್ಕೆ ಅವರ ಕುಟುಂಬದವರನ್ನೂ ಆಹ್ವಾನಿಸಲಾಗಿತ್ತು.

- Advertisement -


ಕಂಪನಿಯ ಆರಂಭದ ದಿನಗಳಿಂದಲೂ ಜೊತೆಗಿದ್ದು, ವಿವಿಧ ಸವಾಲು, ಸಂಕಷ್ಟಗಳ ನಡುವೆಯೂ ಕಂಪನಿಯ ಉನ್ನತಿಗಾಗಿ ಕರ್ತವ್ಯ ನಿರ್ವಹಿಸಿದ ಐವರು ʼವಿನಮ್ರ ಹಿನ್ನಲೆʼಯಿಂದ ಬಂದವರಾಗಿದ್ದಾರೆ. ಇತರ ಉದ್ಯೋಗಿಗಳಿಗೂ ಇದು ಸ್ಫೂರ್ತಿಯಾಗಿದೆ. ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಲು ನಾವು ಅವರನ್ನು ಪ್ರೇರೇಪಿಸಲು ಬಯಸುತ್ತೇವೆ. ನಮ್ಮ ಸಂಸ್ಥೆಯಲ್ಲಿ ಇತರ ಕಂಪನಿಗಳಂತೆ ಯಾವುದೇ ಅನಾರೋಗ್ಯ ರಜೆ ಅಥವಾ ಇನ್ನಿತರ ರಜೆ ಇರುವುದಿಲ್ಲ. ಕಚೇರಿ ಅಥವಾ ಮನೆಯಿಂದಲೇ ಕೆಲಸ ಮಾಡಬಹುದು. ಬಯೋಮೆಟ್ರಿಕ್ ವ್ಯವಸ್ಥೆಯಂತಹ ಹಾಜರಾತಿ ವ್ಯವಸ್ಥೆ ನಮ್ಮಲ್ಲಿಲ್ಲ. ನಮ್ಮ ಎಲ್ಲಾ ನೌಕರರು ಕುಟುಂಬ ಸದಸ್ಯರಂತೆ ಎಂದು ಎಂದು CEO ಸುರೇಶ್‌ ಸಂಬಂದಂ ಹೇಳಿದ್ದಾರೆ.



Join Whatsapp