ಮುಂಬೈ, ದೆಹಲಿ ವಿಶ್ವಕಪ್‌ ಪಂದ್ಯಗಳಲ್ಲಿ ಇನ್ಮುಂದೆ ಪಟಾಕಿ ಬಳಕೆ ಇಲ್ಲ

Prasthutha|

ವಿಶ್ವಕಪ್‌ ಪಂದ್ಯಗಳಲ್ಲಿ ಈ ಬಾರಿ ಅಭಿಮಾನಿಗಳ ಮನರಂಜನೆಗಾಗಿ ಲೈಟ್‌ ಷೋ, ಆಕಾಶದಲ್ಲಿ ಧಾಂ ದೂಂ ಪಟಾಕಿಗಳ ಸದ್ದು ಜೊರಾಗಿರುತ್ತದೆ. ಆದರೆ ಇನ್ನು ಮುಂದೆ ವಿಶ್ವಕಪ್‌ ಪಂದ್ಯಗಳ ವೇಳೆ ಪಟಾಕಿ ಬಳಕೆಯನ್ನ ನಿಲ್ಲಿಸೋದಾಗಿ BCCI ಹೇಳಿದೆ. ಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗ್ತಿರೊ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ಮುಂಬೈ ನಗರದಲ್ಲು ಫಾಗ್‌ ಸಮಸ್ಯೆ ಹೆಚ್ಚಾಗಿದ್ದು, ಬಾಂಬೆ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ಕ್ರಮ ತಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅಂದೇ BCCI ಇಂತಹ ನಿರ್ಣಯಕ್ಕೆ ಬಂದಿದ್ದು, ಈ ಬಗ್ಗೆ ICCಗೆ ಮಾಹಿತಿ ನೀಡಲಾಗಿದೆ ಎಂದು BCCI ಸೆಕ್ರೆಟರಿ ಜಯ್ ಶಾ ಹೇಳಿದ್ದಾರೆ.

ಇಂದು ಭಾರತ ಮುಂಬೈನಲ್ಲಿ ಲಂಕಾ ವಿರುದ್ಧ ಮುಂಬೈನಲ್ಲಿ ಕಣಕ್ಕಿಳಿಯಲಿದೆ, ನವೆಂಬರ್‌ 6 ಸೋಮವಾರ ದೆಹಲಿಯಲ್ಲಿ ಬಾಂಗ್ಲಾ-ಶ್ರೀಲಂಕಾ ಪಂದ್ಯ ನಡೆಯಲಿದೆ. ಎರಡು ನಗರಗಳಲ್ಲಿ ಸದ್ಯಕ್ಕೆ ಗಾಳಿ ಗುಣಮಟ್ಟ ಸೂಚ್ಯಂಕ ಕ್ರಮವಾಗಿ 172 ಮತ್ತು 260 ತಲುಪಿದೆ.

Join Whatsapp