ವಿಶ್ವ ಆರೋಗ್ಯ ಸಂಸ್ಥೆಯ ವಲಯ ನಿರ್ದೇಶಕಿಯಾಗಿ ಬಾಂಗ್ಲಾ ಪ್ರಧಾನಿ ಪುತ್ರಿ ಆಯ್ಕೆ

Prasthutha|

ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ವಲಯದ ನಿರ್ದೇಶಕಿಯಾಗಿ ಬಾಂಗ್ಲಾ ದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಪುತ್ರಿ ಆಯ್ಕೆಯಾಗಿದ್ದಾರೆ. ಇಂತಹ ಪ್ರಮುಖ ಹುದ್ದೆಗೆ ಪ್ರಧಾನಿಯೊಬ್ಬರ ಪುತ್ರಿ ಇದೇ ಮೊದಲ ಬಾರಿಗೆ ಆಯ್ಕೆಯಾಗುತ್ತಿದ್ದಾರೆ.

- Advertisement -

ಆಗ್ನೇಯ ಏಷ್ಯಾ ವಲಯದ WHO ಪ್ರಾದೇಶಿಕ ಸಮಿತಿಯ 76ನೇ ಅಧಿವೇಶನದಲ್ಲಿ ಸದಸ್ಯ ರಾಷ್ಟ್ರಗಳು ವಾಝೇದ್ ಅವರನ್ನು ಪ್ರಾದೇಶಿಕ ನಿರ್ದೇಶಕಿ ಹುದ್ದೆಗೆ ನಾಮನಿರ್ದೇಶನ ಮಾಡುವ ಪರವಾಗಿ ಮತ ಚಲಾಯಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆಯ ಪ್ರಕಾರ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಜನವರಿ 22 ರಿಂದ 27 ರವರೆಗೆ ನಡೆಯುವ 154ನೇ ಅಧಿವೇಶನದಲ್ಲಿ WHO ಕಾರ್ಯಕಾರಿ ಮಂಡಳಿಗೆ ಈ ನಾಮನಿರ್ದೇಶನವನ್ನು ಸಲ್ಲಿಸಲಾಗುತ್ತದೆ.

- Advertisement -

ಫೆಬ್ರವರಿ 1, 2024 ರಂದು ವಾಝೇದ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡಾ ಶಂಭು ಪ್ರಸಾದ್ ಆಚಾರ್ಯ ಅಭ್ಯರ್ಥಿಯಾಗಿದ್ದರು. ಅವರು ನೇಪಾಳದಿಂದ ನಾಮ ನಿರ್ದೇಶನಗೊಂಡಿದ್ದರು.

Join Whatsapp