ಶಾಪಿಂಗ್​ ಮಾಲ್​‌​ನಲ್ಲಿ ಅಗ್ನಿ ಅನಾಹುತ| 6 ಮಂದಿ ಮೃತ್ಯು

Prasthutha|

ಹೈದರಾಬಾದ್​: ಶಾಪಿಂಗ್ ಮಾಲ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿ ಆರು ಮಂದಿ ಮೃತಪಟ್ಟ ಘಟನೆ ಸಿಕಂದರಾಬಾದ್‌ನಲ್ಲಿ ಗುರುವಾರ ನಡೆದಿದೆ.

- Advertisement -

ಮೃತಪಟ್ಟವರನ್ನು ಪ್ರಮೀಳಾ, ವೆನ್ನೆಲಾ, ಶ್ರಾವಣಿ, ಪ್ರಶಾಂತ್, ತ್ರಿವೇಣಿ, ಶಿವ ಎಂದು ಗುರುತಿಸಲಾಗಿದೆ.

ಗುರುವಾರ (ಮಾ.16)ರ ಸಂಜೆ ಸಿಕಂದರಾಬಾದ್​ನ ಸ್ವಪ್ನಲೋಕ ಶಾಪಿಂಗ್​ ಮಾಲ್ ಕಾಂಪ್ಲೆಕ್ಸ್​ನ 5ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆ ಆವರಿಸಿದ್ದರಿಂದ ಉಸಿರಾಡಲು ಆಗದೆ 6 ಜನರು ಸಾವನ್ನಪ್ಪಿರಬಹುದು ಎಂದು ಅದಾಜಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಗುರುವಾರ ಸಂಜೆ 7:30 ಕ್ಕೆ ಶಾರ್ಟ್​ ಸರ್ಕ್ಯೂಟ್​​​ನಿಂದ 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ 6 ಮತ್ತು 7ನೇ ಮಹಡಿಗೂ ವ್ಯಾಪಿಸಿತ್ತು. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ​ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದು, 10 ಅಗ್ನಿಶಾಮಕ ವಾಹನಗಳ ಮೂಲಕ ರಾತ್ರಿ 11:30ರ ವೇಳೆಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Whatsapp