ರಾಜಾಸೀಟ್‌ ನಲ್ಲಿ ಕಾಣಿಕೊಂಡ ಬೆಂಕಿ: ಪ್ರವಾಸಿಗರದಲ್ಲಿ ಆತಂಕ

Prasthutha|

ಮಡಿಕೇರಿ: ಪ್ರಸಿದ್ದ ಪ್ರವಾಸಿ ತಾಣ ರಾಜಾಸೀಟ್‌ ನಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ರಾಜಾಸೀಟ್‌ ನ ವ್ಯೂ ಪಾಯಿಂಟ್ ಹಿಂಬದಿಯಲ್ಲಿನ ಗುಡ್ಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ 2 ಎಕರೆ ಅರಣ್ಯ ಭಸ್ಮವಾಗಿದೆ.

- Advertisement -

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ದಾವಿಸಿದರೂ ವಾಹನ ರಾಜಾಸೀಟಿನ ಒಳಭಾಗಕ್ಕೆ ಬರಲಾಗಿಲ್ಲ. ನಂತರ ಅರಣ್ಯ ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರು ಯುವಕರು ಸೊಪ್ಪಿನ ಕೊನೆಗಳನ್ನು ಹಿಡಿದು ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಹೂವಿನ ಗಿಡಗಳಿಗೆ ನೀರು ಬಿಡುವ ಪೈಪ್‌ ಗಳ ಸಹಾಯದಿಂದ ಬಂಕಿ ನಂದಿಸುವ ಕಾರ್ಯ ನಡೆಯಿತ್ತು. ಆದ್ರೂ ಕುರುಚಲು ಕಾಡು ಸೊಡು ಸುಟ್ಟು ಕರಕಲಾಯಿತ್ತು. ಹರಸಾಹಸದ ಮೂಲಕ ಅಗ್ನಿಯನ್ನು ನಿಯಂತ್ರಸಲಾಯಿತ್ತು.

Join Whatsapp