ಮುಂಬೈ: ನಗರದ ಕಂಜುರ್ಮಾರ್ಗ್ನಲ್ಲಿರುವ ಸ್ಯಾಮ್ಸಂಗ್ ಸರ್ವೀಸ್ ಸೆಂಟರ್ನಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಂಜುರ್ಮಾರ್ಗ್ ಪೂರ್ವ ಪೊಲೀಸ್ ಠಾಣೆ ಬಳಿಯಿರುವ ಸ್ಯಾಮ್ ಸಂಗ್ ಸರ್ವೀಸ್ ಸೆಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎನ್ನಲಾಗಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ.
ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ನೀರಿನ ಟ್ಯಾಂಕರ್ಗಳು ಧಾವಿಸಿವೆ. ಬೆಂಕಿಯ ತೀವ್ರತೆಗೆ ಮುಂಬೈ ಸ್ಕೈಲೈನ್ ಮುಂದೆ ದಟ್ಟಹೊಗೆ ಕಾಣಿಸಿಕೊಂಡಿದೆ. ರಾತ್ರಿ 9ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ಮುಂಬೈ ಅಗ್ನಿಶಾಮಕ ದಳ 8 ಅಗ್ನಿಶಾಮಕ ವಾಹನಗಳು, 4 ನೀರಿನ ಟ್ಯಾಂಕರ್ಗಳು ಸ್ಥಳಕ್ಕೆ ಧಾವಿಸಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಎಎನ್ ಐ ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಪ್ರಶಾಂತ್ ಕಡಂ ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು, ನಾಲ್ಕು ನೀರಿನ ಟ್ಯಾಂಕರ್ಗಳನ್ನು ಘಟನಾ ಸ್ಥಳಕ್ಕೆ ಆಗಮಿಸಿದೆ. ವೈದ್ಯಕೀಯ ತುರ್ತು ಬಳಕೆಗಾಗಿ ಆಂಬ್ಯುಲೆನ್ಸ್ ಕೂಡ ಧಾವಿಸಿದೆ . ರಾತ್ರಿ 9ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ, ನಮಗೆ ರಾತ್ರಿ 9.42ಕ್ಕೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.