ಪೆಟ್ರೋಲಿಯಂ ಡಿಪೋದಲ್ಲಿ ಬೆಂಕಿ ಅವಘಡ, 7 ಮಂದಿಗೆ ಗಾಯ

Prasthutha|

ಭೋಪಾಲ್: ಪೆಟ್ರೋಲಿಯಂ ಡಿಪೋವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಏಳು ಮಂದಿ ಗಾಯಗೊಂಡಿರುವ ಘಟನೆ ಭೋಪಾಲ್ ನ ಬಕಾನಿಯಾ ಪ್ರದೇಶದಲ್ಲಿ ನಡೆದಿದೆ.

- Advertisement -

ಗಾಯಗೊಂಡವರನ್ನು ಸಲ್ಮಾನ್ (30), ಶಾನು (35), ವಿನೋದ್ (37), ರಾಜಾ ಮಿಯಾನ್ (40) ಮತ್ತು ಸಿರಾಜ್ (18) ಮತ್ತು ಹೋಶಂಗಾಬಾದ್ ನಿವಾಸಿಗಳಾದ ಆಂತ್ರಾಮ್ (40) ಮತ್ತು ಛೋಟೆಲಾಲ್ (28) ಎಂದು ಗುರುತಿಸಲಾಗಿದೆ.

ಶುಕ್ರವಾರ ರಾತ್ರಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಡಿಪೋವನ್ನು ಮರುಭರ್ತಿ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

- Advertisement -

ರೀಫಿಲ್ಲಿಂಗ್ ಸಮಯದಲ್ಲಿ ಗಾಳಿ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗಾಯಗೊಂಡ ಎಲ್ಲ ವ್ಯಕ್ತಿಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಭೋಪಾಲ್ ನ ಉಪ ಪೊಲೀಸ್ ಆಯುಕ್ತ ವಿಜಯ್ ಖತ್ರಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.



Join Whatsapp