ಹೈದರಾಬಾದ್: ಐತಿಹಾಸಿಕ ಹಿನ್ನೆಲೆಯುಳ್ಳ ಭಾರತೀಯ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿದ್ದ ಸಿಕಂದರಾಬಾದ್ ಕ್ಲಬ್ ಬೆಂಕಿಗಾಹುತಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಸಿಕಂದರಾಬಾದ್ ಕ್ಲಬ್ ನಲ್ಲಿ ಕಾಣಿಸಿಕೊಂಡ ಭಾರೀ ಬೇಂಕಿಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 7 ಅಗ್ನಿಶಾಮಕ ದಳ ವಾಹನಗಳು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುರಂತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸುಮಾರು 20 ಎಕರೆ ಪ್ರದೇಶದಲ್ಲಿರುವ ಈ ಕ್ಲಬ್ ಅನ್ನು ಕೇಂದ್ರ ಸರ್ಕಾರವು 2017ರಲ್ಲಿ ಭಾರತೀಯ ಪರಂಪರೆಯ ತಾಣವೆಂದು ಗುರುತಿಸಿ ಅಂಚೆ ಕವರ್ ಬಿಡುಗಡೆ ಮಾಡಿತ್ತು.
ಈ ಕ್ಲಬ್‌ನಲ್ಲಿ 250 ಸಾಮಾನ್ಯ ನೌಕರರು ಮತ್ತು 100 ಗುತ್ತಿಗೆ ನೌಕರರು ಸೇರಿದಂತೆ 350 ಮಂದಿ ಕೆಲಸ ಮಾಡುತ್ತಿದ್ದು, ಸುಮಾರು 5 ಸಾವಿರ ಮಂದಿ ಕ್ಲಬ್ನ ಸದಸ್ಯತ್ವ ಹೊಂದಿದ್ದಾರೆ.