ಉದಯನಿಧಿ ಸ್ಟಾಲಿನ್​​ ಹೇಳಿಕೆ ವಿರುದ್ಧ ಟ್ವೀಟ್​ ಮಾಡಿದ ಅಮಿತ್ ಮಾಳವೀಯ ವಿರುದ್ಧ FIR ದಾಖಲು

Prasthutha|

ಚೆನ್ನೈ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ವಿರುದ್ಧ ತಿರುಚಿರಾಪಳ್ಳಿ ಪೊಲೀಸರು ಐಪಿಸಿಯ 4 ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

- Advertisement -

ಸಚಿವ ಉದಯನಿಧಿ ಸ್ಟಾಲಿನ್​ ಭಾಷಣದ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದ ಮಾಳವೀಯ, ಸನಾತನ ಧರ್ಮವನ್ನು ಅನುಸರಿಸುವ 80% ಜನರ ಜನಾಂಗೀಯ ಹತ್ಯೆಗೆ ನೀಡಿದ ಕರೆಯಾಗಿದೆ ಎಂದು ಅಮಿತ್ ಮಾಳವೀಯ ಟ್ವೀಟ್​​ ಮಾಡಿದ್ದರು. ಹಾಗಾಗಿ ಸೆಕ್ಷನ್ 153, 153 (ಎ), 504, 504 (1) (ಬಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಡಿಎಂಕೆ ವಕೀಲ ವಿಭಾಗದ ಕೆ.ಎ.ವಿ.ದಿನಕರನ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅದೇ ರೀತಿಯಾಗಿ ಮಧುರೈ ಸೈಬರ್ ಕ್ರೈಂ ಪೊಲೀಸರು ಉದಯನಿಧಿಯನ್ನು ಕೊಂದವರಿಗೆ ಬಹುಮಾನವನ್ನು ಘೋಷಿಸಿದ ಉತ್ತರಪ್ರದೇಶದ ಸ್ವಾಮೀಜಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತ ಪಿಯೂಷ್ ರೈ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.



Join Whatsapp