ಅಖಿಲೇಶ್ ವಿರುದ್ಧ ಮಾನಹಾನಿ ಪೋಸ್ಟ್| ಮಾರ್ಕ್ ಜುಕರ್’ಬರ್ಗ್ ವಿರುದ್ಧ FIR!

Prasthutha|

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಮಾನಹಾನಿ ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ದೈತ್ಯ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್’ಬರ್ಗ್ ವಿರುದ್ಧ FIR ದಾಖಲಾಗಿದೆ.

- Advertisement -

ಮಾರ್ಕ್ ಜುಕರ್’ಬರ್ಗ್ ಸೇರಿದಂತೆ 50 ಮಂದಿ ಮೇಲೆ ಉತ್ತರ ಪ್ರದೇಶದ ಕೌನಜ್ ಜಿಲ್ಲೆಯ ಸ್ಥಳೀಯ ಕೋರ್ಟಿನಲ್ಲಿ ದೂರು ದಾಖಲಿಸಲಾಗಿದೆ.
ಕನೌಜ್ ಜಿಲ್ಲೆಯ ಸರಹತಿ ಗ್ರಾಮದ ನಿವಾಸಿ ಅಮಿತ್ ಕುಮಾರ್ ಎಂಬುವವರು ಜುಕರ್’ಬರ್ಗ್ ಮತ್ತು ಇತರ 49 ಮಂದಿ ವಿರುದ್ಧ ದೂರು ದಾಖಲಿಸಿದ್ದು, ‘ಬುವಾ ಬಬುವಾ’ ಎಂಬ ಫೇಸ್ಬುಕ್ ಪುಟದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಅವರ ವರ್ಚಸ್ಸಿಗೆ ಧಕ್ಕೆ ತರುವಂತಹ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಮೇ 25ರಂದು ಪೊಲೀಸ್ ವರಿಷ್ಠಾಧಿಕಾರಿಗೆ ಅಮಿತ್ ಕುಮಾರ್ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಕೋರ್ಟ್ ಮೊರೆ ಹೋಗಿದ್ದ ಅವರು ಕಂಪೆನಿ ಸಿಇಒ ಜುಕರ್’ಬರ್ಗ್ ಸೇರಿದಂತೆ ಫೇಸ್ಬುಕ್ ಪೇಜ್ ಅಡ್ಮಿನ್ ವಿರುದ್ಧ ಕ್ರಮ ಕೈಗೊಳ್ಳವಂತೆ ಕೋರಿದ್ದರು.

- Advertisement -

ಅಮಿತ್ ಕುಮಾರ್ ಅವರ ದೂರನ್ನು ಅನ್ವಯಿಸಿ ಎಫ್ಐಆರ್ ದಾಖಲಿಸುವಂತೆ ಮುಖ್ಯ ಮ್ಯಾಜಿಸ್ಟ್ರೇಟ್ ಧರ್ಮವೀರ್ ಸಿಂಗ್ ಪೊಲೀಸರಿಗೆ ನಿರ್ದೇಶನ ನೀಡಿದ್ದರು.



Join Whatsapp