ದೆಹಲಿ: ಪೆಟ್ರೋಲ್ ದರದಲ್ಲಿ ಗಣನೀಯ ಇಳಿಕೆ

Prasthutha|

ಆಗ್ರಾ: ದೆಹಲಿ ಸರ್ಕಾರ ಬುಧವಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಅನ್ನು 30 ಶೇಕಡಾದಿಂದ 19.40 ಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 8 ರೂಪಾಯಿಯಷ್ಟು ಕಡಿತಗೊಳಿಸಿದೆ.

- Advertisement -

ಪ್ರಸಕ್ತ ಸರ್ಕಾರದ ನೂತನ ಆದೇಶವು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಸತತ 27 ದಿನಗಳ ಕಾಲ ಇಂಧನ ಬೆಲೆಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಇದಕ್ಕೂ ಮೊದಲು ನವೆಂಬರ್ 4 ರಂದು ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

- Advertisement -

ಸದ್ಯ ದೆಹಲಿಯಲ್ಲಿ ಪೆಟ್ರೋಲ್ 103.97 ಕ್ಕೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 86.67 ರಲ್ಲಿ ದೊರೆಯುತ್ತದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 109.98 ರಂತೆ ಮಾರಾಟವಾದರೆ, ಡೀಸೆಲ್ ಪ್ರತಿ ಲೀಟರ್ ಗೆ 94.14 ರಂತೆ ಮಾರಾಟವಾಗುತ್ತಿದೆ.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ದರ ಅತೀ ಹೆಚ್ಚು ಎಂದು ಹೇಳಲಾಗಿದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ರಾಜ್ಯಾದ್ಯಂತ ದರಗಳಲ್ಲಿ ಬದಲಾವಣೆಯಾಗುತ್ತದೆ.

Join Whatsapp