ಮುಂಬೈ : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ. ಕಾಂಡಿವಾಲಿಯ ಸಮತಾ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಲಾಗಿದೆ. ಬಾಂದ್ರಾ ಪೂರ್ವ ಭಾಗದ ನಿರ್ಮಲಾ ನಗರದಲ್ಲಿ ಮತ್ತೊಂದು ದೂರು ದಾಖಲಾಗಿದೆ.
2019ರಲ್ಲಿ ಬಾಲಕೋಟ್ ನಲ್ಲಿ ಭಾರತೀಯ ಸೇನೆ ವಾಯು ದಾಳಿ ನಡೆಸಿದ ಬಗ್ಗೆ ಅರ್ನಾಬ್ ಗೆ ಮೊದಲೇ ತಿಳಿದಿತ್ತು. ಈ ವಿಷಯ ಆತ ಮತ್ತು ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ನಡುವಿನ ವಾಟ್ಸಪ್ ಚಾಟ್ ವಿವರಗಳಿಂದ ಗೊತ್ತಾಗಿದೆ. ಹೀಗಾಗಿ ಆತನ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮನವಿ ಮಾಡಲಾಗಿದೆ.
ಒಎಸ್ ಎದ ಸೆಕ್ಷನ್ 5 ಅನ್ನು ಉಲ್ಲಂಘಿಸಿದಕ್ಕಾಗಿ ಅರ್ನಾಬ್ ನನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಗುರಿಪಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
“ಬಾಲಕೋಟ್ ದಾಳಿಯ ಬಗ್ಗೆ ಅವರಿಗೆ ಯಾರು ಮಾಹಿತಿಗಳನ್ನು ನೀಡಿದ್ದರು ಎಂಬುದು ತಿಳಿಯಬೇಕಿದೆ” ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಹೇಳಿದ್ದಾರೆ. ನಿರ್ಮಲ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಶಾಸಕ ಜೀಶಾನ್ ಸಿದ್ದೀಕಿ ದೂರು ದಾಖಲಿಸಿ, ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಒತ್ತಾಯಿಸಿದ್ದಾರೆ.