ನೇತಾಜಿ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿರುವುದಕ್ಕೆ ಸಂಘದ ಬೆಂಬಲವಿಲ್ಲ : ಆರೆಸ್ಸೆಸ್ ಮುಖಂಡ

Prasthutha|

ಕೊಲ್ಕತಾ : ಇತ್ತೀಚೆಗೆ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ, ಪ.ಬಂ. ಸಿಎಂ ಮಮತಾ ಬ್ಯಾನರ್ಜಿ ಭಾಷಣಕ್ಕೂ ಮೊದಲು ‘ಜೈ ಶ್ರೀರಾಮ್’ ಘೋಷಣೆ ಕೂಗಿರುವುದು ಸರಿಯಲ್ಲ ಎಂದು ಆರೆಸ್ಸೆಸ್ ಅಭಿಪ್ರಾಯ ಪಟ್ಟಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀಮ್’ ಕೂಗಿರುವುದನ್ನು ಸಂಘ ಬೆಂಬಲಿಸುವುದಿಲ್ಲ ಎಂದು ಆರೆಸ್ಸೆಸ್ ಮುಖಂಡರೊಬ್ಬರು ಹೇಳಿದ್ದಾರೆ.

- Advertisement -

ನೇತಾಜಿ ಅವರಿಗೆ ಗೌರವ ಸಲ್ಲಿಸುವ ಸರಕಾರಿ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಬಾರದಿತ್ತು ಎಂಬುದು ಸಂಘದ ನಿಲುವು ಎಂದು ಆರೆಸ್ಸೆಸ್ ಬಂಗಾಳ ಘಟಕದ ಪ್ರಧಾನ ಕಾರ್ಯದರ್ಶಿ ಜಿಷ್ಣು ಬಸು ಹೇಳಿದ್ದಾರೆ.

“ಏನು ನಡೆದಿದೆಯೋ ಅದರಿಂದ ಸಂಘಕ್ಕೆ ಸಂತೋಷವಾಗಿಲ್ಲ. ಘೋಷಣೆ ಕೂಗಿದವರು ನೇತಾಜಿಗಾಗಲೀ, ರಾಮನಿಗಾಗಲೀ ಗೌರವ ತೋರಲಿಲ್ಲ. ನೇತಾಜಿಯವರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದು ಯಾರು ಎಂಬುದನ್ನು ಪತ್ತೆಹಚ್ಚಬೇಕು. ಇದರಲ್ಲಿ ಭಾಗಿಯಾದವರನ್ನು ಪಕ್ಷ ಗುರುತಿಸಬೇಕು” ಎಂದು ಬಸು ತಿಳಿಸಿದ್ದಾರೆ.  

- Advertisement -

ಜ.23ರಂದು ನೇತಾಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಮಾತನಾಡಲು ಆಹ್ವಾನಿಸಿದಾಗ, ಕೆಲವರು ‘ಜೈ ಶ್ರೀರಾಮ್’ ಮತ್ತು ‘ಮೋದಿ ಮೋದಿ’ ಎಂಬ ಘೋಷಣೆಗಳನ್ನು ಕೂಗಿದ್ದರು.

ಇದರಿಂದ ಬೇಸರಗೊಂಡ ಮಮತಾ, ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಧನ್ಯವಾದ ತಿಳಿಸಿ, ಈ ರೀತಿ ಅವಮಾನಿಸಬಾರದಿತ್ತು ಎಂದು ಹೇಳಿ, ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು.  

Join Whatsapp