ಐಪಿಎಲ್ 2023| ಹರಾಜಿಗೆ 405 ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

Prasthutha|

ಹೊಸದಿಲ್ಲಿ: ಐಪಿಎಲ್‌ 2023ರ ಆವೃತ್ತಿಯ ಹರಾಜಿಗೆ ಲಭ್ಯರಿರುವ 405 ಆಟಗಾರರ ಪಟ್ಟಿಯನ್ನು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದೆ.

- Advertisement -

ಆರಂಭದಲ್ಲಿ 991 ಆಟಗಾರರಿದ್ದ ಪಟ್ಟಿ ಸದ್ಯ 405ಕ್ಕೆ ಇಳಿದಿದೆ. 405 ಆಟಗಾರರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಇದ್ದಾರೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್‌, 15 ವರ್ಷದ ಅಲ್ಹಾ ಮೊಹಮ್ಮದ್‌ ಘಝನ್ಫರ್‌ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2007ರ ಜುಲೈ 15ರಂದು ಜನಿಸಿರುವ ಘಝನ್ಫರ್‌ ಮೂರು ಟಿ20 ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ.

- Advertisement -

ಭಾರತದ, 40 ವರ್ಷದ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

Join Whatsapp