ಕಾಶ್ಮೀರದ ಫೈಲ್ಸ್ ಮತ್ತು PILES

Prasthutha|

“ಕಾಶ್ಮೀರ್ ಫೈಲ್ಸ್ ” ಸಿನಿಮಾದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಇದು ಕೇವಲ ಸಿನಿಮಾ ಕುರಿತ ಚರ್ಚೆಯಾಗಿ ಉಳಿದಿಲ್ಲ. ಈ ಚರ್ಚೆಗೆ ರಾಜಕೀಯ ಆಯಾಮವೂ ಇದೆ. ಸಿನಿಮಾವನ್ನು ಎಲ್ಲೆಡೆ ಪ್ರದರ್ಶನ ಮಾಡಿ ಹಿಂದೂ ಮತಗಳನ್ನು ಇನ್ನಷ್ಟು ಒಗ್ಗೂಡಿಸುವ ಇರಾದೆ ಬಿಜೆಪಿ ನಾಯಕರದ್ದು. ಬಿಜೆಪಿ ನಾಯಕರು ಮುಂದೆ ನಿಂತು ಈ ಸಿನಿಮಾದ ಪ್ರದರ್ಶನಗಳನ್ನು ಎಲ್ಲೆಡೆ ಏರ್ಪಡಿಸುವುದು ಗಮನಿಸಿದರೆ ಇದು ಸ್ಪಷ್ಟವಾಗುತ್ತಿದೆ.

- Advertisement -

ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗಿರುವ, ನಿರುದ್ಯೋಗದ ಏರಿಕೆ ತಡೆಯುವಲ್ಲಿ ಅಸಹಾಯಕವಾಗಿರುವ, ಆರ್ಥಿಕತೆಯ ಪುನಶ್ಚೇತನದಲ್ಲಿ ವೈಫಲ್ಯ ಕಂಡಿರುವ ಕೇಂದ್ರದ  ಬಿಜೆಪಿ ಸರಕಾರಕ್ಕೆ, ಚುನಾವಣೆ ಗೆಲ್ಲಲು ಇಂತಹ ಅತಿಭಾವುಕತೆಯ ಸಂಗತಿಗಳ ವೈಭವೀಕರಣವೇ ಉಳಿದಿರುವ ದಾರಿ ಎನ್ನುವುದೂ ಇತ್ತೀಚಿನ ಹಲವು ಪ್ರಕರಣಗಳಿಂದ ಸ್ಪಷ್ಟವಾಗಿದೆ.

ಕಾಶ್ಮೀರ್ ಫೈಲ್ಸ್  ಸಿನಿಮಾ ನಾನು ನೋಡಿಲ್ಲ. ಹಾಗಾಗಿ ಚಿತ್ರದ ವಿಮರ್ಶೆ ಮಾಡುವುದಿಲ್ಲ. ನೋಡುಗನ ಮೇಲೆ ಸಿನಿಮಾ ಉಂಟು ಮಾಡುವ ಪರಿಣಾಮವೇ ಒಂದು ಚಿತ್ರದ ಯಶಸ್ಸಿಗೆ ಕಾರಣವಾಗುತ್ತದೆ. ಆ ಹಿನ್ನೆಲೆಯಲ್ಲಿ ಇದೊಂದು ಯಶಸ್ವೀ ಸಿನಿಮಾ ಆಗಿರಬಹುದು.

- Advertisement -

ಸಿನಿಮಾ ಎಂದಾಗ ಅತಿಶಯೋಕ್ತಿಯ ಡೈಲಾಗ್ ಗಳು, ಪ್ರೇಕ್ಷಕನ ಕಣ್ಣೀರು ಉಕ್ಕುವಂತೆ ವೈಭವೀಕರಣ ಎಲ್ಲವೂ ಮಾಮೂಲು. ಪ್ರೇಕ್ಷಕರು ಅಳುವ ಕಡಲಿನಲಿ ತೇಲಿ ಹೋಗುವಂತೆ ಮಾಡುವ ಹಲವು ಕಾಲ್ಪನಿಕ ಕಥೆಗಳ ಸಿನಿಮಾಗಳು ಈಗಾಗಲೆ ಸಾಲು ಸಾಲಾಗಿ ಬಂದಿವೆ.

ಅದರೆ “ಕಾಶ್ಮೀರ್ ಫೈಲ್ಸ್” ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದು ನಿರ್ಮಾಪಕರು ಪ್ರಚಾರ ಮಾಡಿದ್ದಾರೆ. ಸತ್ಯ ಘಟನೆಗಳನ್ನು ಆಧರಿಸಿ ಡಾಕ್ಯುಮೆಂಟರಿ ಫಿಲ್ಮ್ ಮಾಡುವವರಿದ್ದಾರೆ. ಹಾಗೆ ಮಾಡಿದಾಗ facts ನಿಂದ ನಿರ್ದೇಶಕರು ಆಚೀಚೆ ಸರಿಯುವುದಿಲ್ಲ. ಹಾಗೆಯೇ ಸತ್ಯ ಘಟನೆ ಆಧಾರಿತ ಸಿನಿಮಾಗಳನ್ನು ಮಾಡಿದವರೂ ಇದ್ದಾರೆ. ಹಾಗೆ ಸಿನಿಮಾ ಮಾಡಿದವರು ಸ್ವಲ್ಪ ಮೆಲೊಡ್ರಾಮಾ, ಸೆಂಟಿಮೆಂಟ್ಸ್ ಎಲ್ಲ ಬೆರೆಸಿ ಸಿನಿಮಾದ ಮಾರಾಟಕ್ಕೆ ಅಸ್ತಿಭಾರ ಹಾಕಿದ್ದೂ ಇದೆ. ಶ್ರೀಲಂಕಾದಲ್ಲಿ ನಡೆದ ತಮಿಳರ ನರಮೇಧದ ಹಿನ್ನೆಲೆಯಲ್ಲಿ ಹಲವು ಸಿನಿಮಾಗಳು ಬಂದಿವೆ. ಮುಂಬೈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲೂ ಸಿನಿಮಾಗಳು ಬಂದಿವೆ. ಇಂದಿರಾ ಕಾಲದ ಎಮರ್ಜನ್ಸಿ ಮೇಲೆ “ಕಿಸ್ಸಾ ಕುರ್ಸೀ ಕಾ” ದಂತಹ ಸಿನಿಮಾಗಳೂ ಬಂದಿವೆ.

ಇತಿಹಾಸದಲ್ಲಿ ದಾಖಲಾದ ದುರಂತಗಳ ಕುರಿತು ಸಿನಿಮಾ ಮಾಡಬಾರದು ಎನ್ನುವುದು ತಪ್ಪು. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ, ದೆಹಲಿಯಲ್ಲಿ ನಡೆದ ಸಿಕ್ಖರ ನರಮೇಧ, ಗುಜರಾತ್ ನಲ್ಲಿ ನಡೆದ ಮುಸ್ಲಿಮರ ನರಮೇಧ, ಮುಂಬೈ ಸ್ಫೋಟ, ಸಂಸತ್ ಮೇಲೆ ಉಗ್ರರ ದಾಳಿ ಮುಂತಾಗಿ ನಮ್ಮ ದೇಶದಲ್ಲಿ ನಡೆದ ಹಲವು ದುರಂತಗಳ ಕುರಿತೂ ಸಿನಿಮಾಗಳನ್ನು ಮಾಡಬಹುದು.

ಆದರೆ ಇಂತಹ ಸಿನಿಮಾಗಳನ್ನು ಮಾಡುವಾಗ ವಸ್ತುನಿಷ್ಠವಾಗಿ ಇರುವುದು ಕಷ್ಟ. ಏಕೆಂದರೆ ಸಿನಿಮಾ ಮನರಂಜನೆಯೂ ಹೌದು, ಬಂಡವಾಳದ ಮೇಲೆ ಲಾಭ ಬಯಸುವ ಉದ್ಯಮವೂ ಹೌದು. ಹಾಗಾಗಿ ಮೆಲೊಡ್ರಾಮ ಅನಿವಾರ್ಯವಾಗುತ್ತದೆ. ಸಿನಿಮಾದ ಈ ಆಮಿಷಗಳನ್ನು ಮೀರಿ ವಸ್ತುನಿಷ್ಠ ಸಿನಿಮಾ ಮಾಡಿದರೆ, ಅದು ಮತ್ತೊಂದು ಡಾಕ್ಯುಮೆಂಟರಿ ಫಿಲಂ ಆಗುತ್ತದೆ.

ಮತ್ತೆ ” ಕಾಶ್ಮೀರ್ ಫೈಲ್ಸ್” ಸಿನಿಮಾದ ವಿಷಯಕ್ಕೆ ಬರುವುದಾದರೆ, ಇವತ್ತು ಸಂಘ ಪರಿವಾರದ ಅಂಗ ಸಂಸ್ಥೆಗಳು  ಮತ್ತು ಬೆಂಬಲಿಗರು ಈ ಸಿನಿಮಾವನ್ನು ಹಿಂದೂ- ಮುಸ್ಲಿಂ ಸಂಘರ್ಷದ ರಾಜಕೀಯ ಆಯಾಮ ಎಂದು ಬಣ್ಣಿಸುತ್ತಿರುವುದು ಎದ್ದು ಕಾಣುತ್ತಿದೆ. “ಪಂಡಿತರ ಮೇಲೆ ನಡೆದ ದೌರ್ಜನ್ಯಗಳಿಗೆ ಕಾಶ್ಮೀರದ ಆಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರೇ ಕಾರಣ. ಅಲ್ಲಿರುವ ಮುಸ್ಲಿಮರೆಲ್ಲರೂ ಉಗ್ರಗಾಮಿಗಳು” ಎನ್ನುವ ಅರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಇತಿಹಾಸದ ಘಟನೆಗಳನ್ನು ತಿರುಚಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ವಾಟ್ಸಪ್ ನಲ್ಲಿ ಬಂದದ್ದೆಲ್ಲ ಸತ್ಯ ಎಂದು ನಂಬುವ ಮುಗ್ಧರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಗಮನಿಸಬೇಕಾದ ಎರಡು ಐತಿಹಾಸಿಕ ಸಂಗತಿಗಳನ್ನಷ್ಟೇ ಇಲ್ಲಿ ಉಲ್ಲೇಖಿಸುತ್ತೇನೆ.

1.  ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡಲು ಹೋರಾಟ ನಡೆಸಿದ್ದು ಶೇಕ್ ಅಬ್ದುಲ್ಲಾ. (ಫಾರೂಕ್ ಅಬ್ದುಲ್ಲಾ ಅವರ ತಂದೆ.) ಆಗ ಕಾಶ್ಮೀರದ ದೊರೆ ಆಗಿದ್ದ ಹರಿ ಸಿಂಗ್ (ಇವರು ಕೆಂದ್ರ ಸಚಿವರಾಗಿದ್ದ ಕರಣ್ ಸಿಂಗ್ ಅವರ ತಂದೆ) ಭಾರತಕ್ಕೆ ತನ್ನ ರಾಜ್ಯವನ್ನು ಸೇರಿಸಲು ಇಷ್ಟ ಪಟ್ಟಿರಲಿಲ್ಲ. ಹೈದರಾಬಾದ್ ನ ನಿಜಾಮರಂತೆ ಸ್ವತಂತ್ರರಾಗಿ ಇರಲು ಹರಿ ಸಿಂಗ್ ಬಯಸಿದ್ದರು ಶೇಕ್ ಅಬ್ದುಲ್ಲಾ ಕಾಶ್ಮೀರಿಗರನ್ನು ಒಗ್ಗೂಡಿಸಿ ಭಾರತದ ಪರವಾದ ಹೋರಾಟಕ್ಕೆ ಕಿಚ್ಚು ಹಚ್ಚಿದರು. ಮುಸ್ಲಿಂ ಲೀಗ್ ಗೆ ವಿರುದ್ಧವಾಗಿ ಅವರು ನ್ಯಾಷನಲ್ ಕಾನ್ಫರೆನ್ಸ್ ಎನ್ನುವ ಪಕ್ಷವನ್ನೂ ಕಟ್ಟಿದರು. ಅವರು ನಿಜವಾದ ರಾಷ್ಟ್ರೀಯವಾದಿ ಆಗಿದ್ದರು.

ಗೃಹ ಸಚಿವ ವಲ್ಲಭಬಾಯಿ ಪಟೇಲರಿಗೆ ಕಾಶ್ಮೀರಕ್ಕಿಂತ ಜುನಾಗಢ್ ಅನ್ನು ಭಾರತಕ್ಕೆ ಸೇರಿಸುವ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಅವರು ಕಾಶ್ಮೀರವನ್ನು ಬಿಟ್ಟುಕೊಡಲೂ ತಯಾರಿದ್ದರು. ಆದರೆ ಜವಾಹರಲಾಲ ನೆಹರೂ ಅವರಿಗೆ ತಮ್ಮ ಕಾಶ್ಮೀರ ಮೂಲದ ಹಿನ್ನೆಲೆಯಲ್ಲಿ ಅದನ್ನು ಭಾರತಕ್ಕೆ ಸೇರಿಸಲೇಬೇಕೆಂಬ ಹಠ ಇತ್ತು. ಬ್ರಿಟಿಷರ ಜೊತೆ ಅದಕ್ಕಾಗಿ ನೆಹರೂ ಒಳ ಒಪ್ಪಂದವನ್ನೂ ಮಾಡಿಕೊಂಡಿದ್ದರು.

2.ಉಗ್ರರ ಉಪಟಳ ತಾಳದೆ ಪಂಡಿತರ ಮಹಾವಲಸೆ ನಡೆದದ್ದು ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಕಾಲದಲ್ಲಿ ಎಂದು ಈಗ ಸಂಘ ಪರಿವಾರದವರು ಪ್ರಚಾರ ಮಾಡುತ್ತಿದ್ದಾರೆ. ಫಾರೂಕ್ ಅಬ್ದುಲ್ಲಾ 1990 ರ ಆರಂಭದಲ್ಲಿ ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದರು ನಿಜ. ಆದರೆ ಗವರ್ನರ್ ಆಗಿ ಜಗ್ ಮೋಹನ್ ಅವರ ನೇಮಕವನ್ನು ಫಾರೂಕ್ ಅಬ್ದುಲ್ಲಾ ತೀವ್ರವಾಗಿ ವಿರೋಧಿಸಿದ್ದರು. ಆ ಹಿನ್ನೆಲೆಯಲ್ಲೇ 1990 ಜನವರಿ 19 ರಂದು ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಆಗ ಕೇಂದ್ರದಲ್ಲಿ ಇದ್ದದ್ದು ಬಿಜೆಪಿ ಬೆಂಬಲಿತ ಪ್ರಧಾನಿ ವಿ.ಪಿ.ಸಿಂಗ್ ಅವರ ಸರ್ಕಾರ. ಕಾಶ್ಮೀರದ ಮೇಲೆ ಕೇಂದ್ರವು ರಾಜ್ಯಪಾಲರ ಆಡಳಿತ ಹೇರಿತು. ಜನವರಿ 19ರಿಂದ ಜುಲೈವರೆಗೆ ಕಾಶ್ಮೀರದಲ್ಲಿ ರಾಜ್ಯಪಾಲರಾಗಿ ಆಡಳಿತ ನಡೆಸಿದ್ದು ಜಗ್ ಮೋಹನ್. ಕಾಶ್ಮೀರದಿಂದ ಪಂಡಿತರನ್ನು ಅಮಾನುಷವಾಗಿ ಹೊರದಬ್ಬುವ ಕ್ರಿಯೆ ನಡೆದದ್ದು ಈ ಅವಧಿಯಲ್ಲೇ. ಸಾವಿರಾರು ಪಂಡಿತರು ತಮ್ಮ ಮೇಲಿನ ಹಲ್ಲೆ, ದೌರ್ಜನ್ಯ, ಅತ್ಯಾಚಾರಗಳನ್ನು ಸಹಿಸಲಾಗದೆ ಮಹಾ ವಲಸೆ ನಡೆಸಿದ್ದು ಫೆಬ್ರುವರಿ- ಮಾರ್ಚ್ ತಿಂಗಳಲ್ಲಿ. ಪಂಡಿತರ ಈ ಪಲಾಯನ ನಡೆಯುವಾಗ  ಬಿಜೆಪಿ ಅಂಗಪಕ್ಷವಾಗಿರುವ ಎನ್ ಡಿ ಎ ಯ ರಾಜ್ಯಪಾಲ ಜಗ್ ಮೋಹನ್ ಕಣ್ಣು ಮುಚ್ಚಿ ಕುಳಿತಿದ್ದರು.

ಆಗ ಕೇಂದ್ರ ಸರಕಾರದಲ್ಲಿ ಮುಫ್ತಿ ಮಹಮದ್ ಸಯೀದ್ ಗೃಹ ಮಂತ್ರಿ ಆಗಿದ್ದರು. ಮುಂದೆ ಮುಫ್ತಿ ಅವರ ಮಗಳಾದ ಮೆಹಬೂಬಾ ಮುಫ್ತಿ ಅವರ ಪಕ್ಷ ಪಿಡಿಪಿ ಜೊತೆ ಸೇರಿ ಬಿಜೆಪಿ ಯವರು ಕಾಶ್ಮೀರದಲ್ಲಿ ಸರಕಾರ ನಡೆಸಿದರು.

ಜಗ್ ಮೋಹನ್ ಹಿಂದೆ ಕಾಂಗ್ರೆಸ್ ಪರವಾಗಿದ್ದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದರು. ಕಾಶ್ಮೀರದ ಗವರ್ನರ್ ಆದ ಬಳಿಕ ಬಿಜೆಪಿ ಬೆಂಬಲಿಗರಾದರು. ಬಳಿಕ ನೇರವಾಗಿ ಬಿಜೆಪಿಗೆ ಸೇರಿದರು. ಎರಡು ಸಲ ಲೋಕಸಭಾ ಚುನಾವಣೆ ಗೆದ್ದರು. ಅಟಲ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ಸಚಿವರೂ ಆದರು.

ಕಾಶ್ಮೀರ್ ಫೈಲ್ಸ್ ಮತ್ತು piles ಎರಡಕ್ಕೂ ನೇರ ಕಾರಣರಾದವರಲ್ಲಿ ಜಗ್ ಮೋಹನ್ ಕೂಡಾ ಒಬ್ಬರು. ಸಿನಿಮಾದಲ್ಲಿ ಅವರ ಚಿತ್ರಣ ಹೇಗೆ ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ. ಇತಿಹಾಸದ ಚಿತ್ರಣ ಎಂದಾಗ ನಿರ್ದೇಶಕರು ಯಾವ ಪಕ್ಷಗಳ ರಾಗ ರಾಗದ್ವೇಷವೂ ಇಲ್ಲದೆ ಚಿತ್ರಿಸಿರಬಹುದು ಅಂದುಕೊಂಡಿದ್ದೇನೆ. ಸಿನಿಮಾದ ಗಂಭೀರ ವಿದ್ಯಾರ್ಥಿಯಾಗಿ ಒಂದು ಸಿನಿಮಾ ನೋಡುವುದು ನನಗಿಷ್ಟ. ಆದರೆ ಅದೇ ಸಿನಿಮಾ ಪಕ್ಷವೊಂದರ ರಾಜಕೀಯ ಅಜೆಂಡಾದ ಭಾಗವಾಗಿದ್ದರೆ ಅಥವಾ ಭಾಗ ಆಗತೊಡಗಿದರೆ ಅದನ್ನು ರಾಜಕೀಯ ವಿಶ್ಲೇಷಕನಾಗಿಯೇ ನೋಡಬೇಕಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ನಿಲುವು.

(ಲೇಖಕರ ಫೇಸ್ ಬುಕ್ ವಾಲ್ ನಿಂದ)

[11:39 AM, 3/15/2022] +91 89711 66055: ಸಿಎಂ ವಿರುದ್ಧ ಕೊಲೆ ಬೆದರಿಕೆ; ಆರ್ ಎಸ್ ಎಸ್ ಕಾರ್ಯಕರ್ತನ ಬಂಧನ

ತಿರುವನಂತಪುರಂ: ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕಿ , ಅಸಭ್ಯಮಾತುಗಳನ್ನಾಡಿದ್ದ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ  ಪಾಲಕ್ಕಾಡ್ ನ ಕಸಬಾ ಎಂಬಲ್ಲಿ ನಡೆದಿದೆ.

ಎಲಪ್ಪುಳ್ಳಿ ತೇನಾರಿ ಮಣಿಯಾಂಚೇರಿ ಮೂಲದ ಜಯಪ್ರಕಾಶ್ (40) ಬಂಧಿತ ಆರೋಪಿ. ಕಳೆದ ಡಿಸೆಂಬರ್ 21 ರಂದು ಈತ ಕೊಲೆ ಬೆದರಿಕೆ ಮತ್ತು ಅವಾಚ್ಯವಾಗಿ ಬೈದು ಪೋಸ್ಟ್ ಹಾಕಿದ್ದ. ಲಾರಿ ಚಾಲಕನಾಗಿರುವ ಈತ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ತಿಳಿದ ಕೂಡಲೇ ತಲೆಮರೆಸಿಕೊಂಡಿದ್ದ.

ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಅಡಗಿಕೊಂಡಿದ್ದಾಗಲೂ ದೂರವಾಣಿ ಮೂಲಕ ಎಲಪ್ಪುಳ್ಳಿ ಯ ಸಿಪಿಎಂ ಕಾರ್ಯಕರ್ತರನ್ನು ಬೈದು ಕೊಲೆ ಬೆದರಿಕೆ ಒಡ್ಡತ್ತಿದ್ದ ಎನ್ನಲಾಗಿದೆ. ಹಿಂದಿನ ದಿನ ಮನೆಗೆ  ಬಂದಿದ್ದ ಆರೋಪಿಯನ್ನು ಆತನ ಮನೆಯಿಂದಲೇ ಬಂಧಿಸಲಾಗಿದೆ.

Join Whatsapp