ಕೋವಿಡ್ ಚಿಕಿತ್ಸೆಗೆ ಅಧಿಕ ಶುಲ್ಕ ಪಡೆದರೆ ದೂರು ಸಲ್ಲಿಸಿ: ದ.ಕ. ಜಿಲ್ಲಾಧಿಕಾರಿ

Prasthutha|

ಮಂಗಳೂರು: ಕೋವಿಡ್ ಚಿಕಿತ್ಸೆಗೆ ಅಧಿಕ ಶುಲ್ಕ ಪಡೆದ ಆರೋಪದ ಹಿನ್ನೆಲೆ ದೂರುಗಳಿದ್ದರೇ ಈಗಲೂ ಸಲ್ಲಿಸಬಹುದಾಗಿದ್ದು, ಅಂತಹ ದೂರುಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.

- Advertisement -

ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 60ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಜನ್, ವೆಂಟಿಲೇಟರ್ ಇಲ್ಲ ಎಂದು ಎಲ್ಲಿಯೂ ಚಿಕಿತ್ಸೆ ನಿರಾಕರಿಸಿಲ್ಲ. ಈ ಸಂಬಂಧ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳು, ಆರೋಗ್ಯ ಮಿತ್ರರನ್ನು ನೇಮಿಸಲಾಗಿದ್ದು, ಅವರ ಮೂಲಕ ಸೂಕ್ತ ಕ್ರಮ ಜರಗಿಸಲಾಗುತ್ತಿದೆ.

ಚಿಕಿತ್ಸೆಗೆ ಸಂಬಂಧಿಸಿ ಬಿಲ್‌ಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. 17 ಆಸ್ಪತ್ರೆಗಳಲ್ಲಿ 2802 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 66 ಪ್ರಕರಣಗಳಲ್ಲಿ ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಸಂಬಂಧಪಟ್ಟ ಆಸ್ಪತ್ರೆಗಳಿಗೆ ಶೋಕಾಸ್ ನೋಟೀಸು ನೀಡಲಾಗಿದೆ. ಈಗ ಯಾರಿಗಾದರೂ ಅಧಿಕ ಶುಲ್ಕ ಪಡೆದ ದೂರುಗಳಿದ್ದಲ್ಲಿ ನೀಡಬಹುದು. ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಲು ಅವಕಾಶವಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ

Join Whatsapp