ಪ್ರೀತಿಗಾಗಿ ಕಾದಾಟ; ಮಾಜಿ ಪ್ರಿಯಕರನಿಂದ ಹಾಲಿ ಪ್ರಿಯಕರನಿಗೆ ಗೂಸಾ

Prasthutha|

ಪುತ್ತೂರು: ತನ್ನ ಪ್ರಿಯತಮೆಯನ್ನು ಪ್ರೀತಿಸಬಾರದೆಂದು ಯುವತಿಯ ಮಾಜಿ ಪ್ರಿಯಕರನೊಬ್ಬ ಯುವಕ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿರುವ ಘಟನೆ ಬಲ್ನಾಡಿನಲ್ಲಿ ನಡೆದಿದೆ.

- Advertisement -


ಹಲ್ಲೆಗೊಳಗಾದವರನ್ನು ಮಂಗಳೂರು ಬಾಪೂಜಿ ನಗರದ ಸಾಗರ್ (23) ಹಾಗೂ ದುರ್ಗಾ ಪ್ರಸಾದ್ ಎಂದು ಗುರುತಿಸಲಾಗಿದೆ. ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಮತ್ತು ಹೇಮಂತ್ ಆರೋಪಿಗಳು.


ಸಾಗರ್ ತನ್ನ ಪ್ರೇಯಸಿ ವೇರಿನಾ ಎಂಬಾಕೆಯ ಜತೆ ಪುತ್ತೂರಿನ ಸಾರ್ವಜನಿಕ ಸ್ಥಳವೊಂದರಲ್ಲಿ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಕೌಶಿಕ್ ವೇರಿನಾಳನ್ನು ತಾನು ಪ್ರೀತಿಸುತ್ತಿದ್ದು, ಆಕೆಯ ಸಹವಾಸವನ್ನು ತೊರೆಯಬೇಕೆಂದು ಸಾಗರ್ ಗೆ ತಾಕೀತು ಮಾಡಿದ್ದಲ್ಲದೇ ಈ ಬಗ್ಗೆ ಮಾತನಾಡಲು ಕರೆದಿದ್ದ.

- Advertisement -

ಈ ಹಿನ್ನೆಲೆಯಲ್ಲಿ ಮಾತುಕತೆಗೆ ಹೋಗಿದ್ದ ಸಾಗರ್ ನ ಮೇಲೆ ಹಲ್ಲೆ ನಡೆಸಿದ ಕೌಶಿಕ್ ವೇರಿನಾಳನ್ನು ಪ್ರೀತಿಸಬಾರೆಂದು ಬೆದರಿಸಿದ್ದಲ್ಲದೇ ತಡೆಯಲು ಮುಂದಾದ ದುರ್ಗಾ ಪ್ರಸಾದ್ ಗೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp